ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
Published on

ತಿ.ನರಸೀಪುರ: ಆಹಾರದಲ್ಲಿ ಪೌಷ್ಟಿಕಾಂಶ ಹಾಗೂ ವಾತಾವರಣದಲ್ಲಿ ಪರಿಶುದ್ಧತೆ ಕ್ಷೀಣಿಸುತ್ತಿರುವುದರಿಂದ ಪ್ರತಿಯೊಬ್ಬರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಹೇಳಿದರು.

ಪಟ್ಟಣದ ಹೆಳವರಹುಂಡಿಯಲ್ಲಿ ಗುರುವಾರ ಶ್ರೀ ಬಸವೇಶ್ವರ ಮೆಡಿಕಲ್ಸ್ ಮತ್ತು ಸರ್ಜಿಕಲ್ಸ್ ಹಾಗೂ ಶ್ರೀ ಬಸವೇಶ್ವರ ಕ್ಲಿನಿಕ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಗಮನಹರಿಸಬೇಕು ಎಂದರು.

ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 180ಕ್ಕೂ ಹೆಚ್ಚು ಜನರು ಮಧುಮೇಹ, ರಕ್ತದೊತ್ತಡ ಹಾಗೂ ಮೂಳೆ ಸಾಂದ್ರತೆ ಪರೀಕ್ಷೆ, ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವಿವಿಧ ಆಸ್ಪತ್ರೆಗಳ ಕೀಲು ಮತ್ತು ಮೂಳೆ ತಜ್ಞರು, ಜನರಲ್ ಫಿಜಿಶಿಯನ್ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಿಕೊಟ್ಟರು.

ಶಿಬಿರದ ಆಯೋಜಕರಾದ ಶೃತಿ ನಾಗರಾಜು, ಮುಟ್ಟನಹಳ್ಳಿ ರಾಜೇಶ್, ಪುರಸಭೆ ಸದಸ್ಯ ಎಸ್.ಕೆ.ಕಿರಣ, ಗ್ರಾಪಂ ಸದಸ್ಯ ಕೆರಗಸೂರು ಮಹದೇವಸ್ವಾಮಿ, ಕುರುಬರ ಸಂಘದ ನಿರ್ದೇಶಕ ಎಚ್.ಸಿ.ಅರುಣ್ ಕುಮಾರ್, ಕೆ.ಎನ್.ಅಶೋಕ್, ಡಿ.ಎಲ್.ಮಹದೇವಪ್ಪ, ಜಗದೀಶ, ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net