ಜೆಸ್ಕಾಂ  ನೂತನ ಎಂಡಿ ರವೀಂದ್ರ ಅಧಿಕಾರ ಸ್ಚೀಕಾರ

IMG-20230906-WA0069
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ

ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ)  ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಕೆಎಎಸ್ ಅಧಿಕಾರಿ  ರವೀಂದ್ರ ಕರಿಲಿಂಗಣ್ಣನವರ ಅಧಿಕಾರ ವಹಿಸಿಕೊಂಡರು.
ಇದುವರೆಗೂ ಅವರು ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಸರ್ಕಾರ ಜೆಸ್ಕಾಂ ಎಂಡಿಯಾಗಿ ವರ್ಗಾವಣೆಗೊಳಿಸಿದೆ.
ಕಲಬುರಗಿ ನಗರದಲ್ಲಿರುವ ಜೆಸ್ಕಾಂ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಪ್ರಭಾರಿ ತಾಂತ್ರಿಕ ನಿರ್ದೇಶಕರು ಆರ್.ಡಿ. ಚಂದ್ರಶೇಖರ , ಮುಖ್ಯ ಅಭಿಯಂತರರು( ಕಾ ) ಎಚ್. ವೆಂಕಟೇಶಪ್ರಸಾದ. ಸಿಎಫ್ಓ  ರೇಣುಕಾ, .ಕಾರ್ಯ ನಿರ್ವಾಹಕ ಅಭಿಯಂತರರು ವಿಭಾಗ -2 ರ ಎಂ.ಎ.ಮಠಪತಿ.. ಕಾರ್ಯ ನಿರ್ವಾಹಕ ಅಭಿಯಂತರರು ಯಾದಗಿರಿ ಡಿ.ರಾಘವೇಂದ್ರ.. ರಮೇಶ್ ಪವಾರ್ ಸಂತೋಷ ಹಿಬಾರೆ. ರಾಘವೇಂದ್ರ ಪಿ.ಎಸ್, ಮಿಹಾಜುದ್ದಿನ್..ಪವಕುಮಾರ ಸಂತೋಷ ಡಂಗೆ ಶಿವಕುಮಾರ್ ಕಿರಣ್ ರಂಜೊಳ್ಕರ್ ಚನ್ನುಗೌಡ ಯಡ್ರಾಮಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಶುಭ ಕೋರಿದರು. ಬಳಿಕ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net