ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ

Published on

ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಶಾಲಾ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ಶಾಲೆಯಲ್ಲಿ ಜರುಗಿತು.

ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಪೈಕ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ತಲೇಕ ಲಕ್ಷ್ಮೀ ನಾರಾಯಣ ಭಟ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಸತೀಶ ವೈ ಲೆಕ್ಕಪತ್ರ ಮಂಡಿಸಿದರು.

21 ಸದಸ್ಯರಿರುವ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಧರ ಭಟ್ ಚೋಕೆಮೂಲೆ, ಉಪಾಧ್ಯಕ್ಷರಾಗಿ ಚಂದ್ರಶೇಖರ ಕುರುಪ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಕೃಷ್ಣ ಪದ್ಮಾರ್ ಒಮ್ಮತದಿಂದ ಆಯ್ಕೆಯಾದರು. ಹಳೇ ವಿದ್ಯಾರ್ಥಿನಿ ಅನ್ನಪೂರ್ಣಾ ಪ್ರಾರ್ಥಿಸಿದರು. ಜತೆಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ ಸ್ವಾಗತಿಸಿದರು. ಮುಖ್ಯಶಿಕ್ಷಕ ಗಿರೀಶ ಎನ್. ವಂದಿಸಿದರು. ಪ್ರಶಾಂತ್ ಬಳ್ಳುಳ್ಳಾಯ ಉಬ್ರಂಗಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net