

ಕೊಕ್ಕರ್ಣೆ: ಸಂತೆಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ಸಾಮಾನ್ಯ ಸಭೆ ಇತ್ತೀಚೆಗೆ ಜರುಗಿತು.
ಸಂಘ ಅಧ್ಯಕ್ಷ ಎ.ಉಮಾಕಾಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಹಾಲು ಒಕ್ಕೂಟ ವ್ಯವಸ್ಥಾಪಕ ಡಾ.ಅನಿಲ್ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ದ.ಕ. ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಮಂಜುನಾಥ್ ಮೊಗವೀರ ರಾಸು ವಿಮೆ ಬಗ್ಗೆ ಲವಣ ಮಿಶ್ರಿತ ಹಾಗೂ ಸಮೃದ್ಧಿ ಮತ್ತು ಪಶು ಆಹಾರ ಬಳಕೆ ಬಗ್ಗೆ ಒಕ್ಕೂಟದಲ್ಲಿ ದೊರೆಯುವ ಯೋಜನೆ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಶೇಖರ ಶೆಟ್ಟಿ ಕೆಳಮನೆ ಹಸಿರು ಮೇವು ಬೆಳೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. 2023-24ನೇ ಸಾಲಿನಲ್ಲಿ ಸಂಘ 3,16,112ರೂ. ಗಳಿಸಿದ್ದು ಶೇ.65 ಹಾಲು ಉತ್ಪಾದಕರಿಗೆ ಬೋನಸ್ ಹಾಗೂ ಶೇ.15 ಡಿವಿಡೆಂಡ್ ಘೋಷಣೆ ಮಾಡಲಾಯಿತು.
ಸಂಘ ನಿರ್ದೇಶಕರಾದ ಶೇಖರ ಶೆಟ್ಟಿ ಸ್ವಾಗತಿಸಿ, ರಾಜೇಶ್ ನಾಯ್ಕ ವರದಿ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ವಂದಿಸಿದರು. ನಿರ್ದೇಶಕರು, ಸದಸ್ಯರು, ಹೈನುಗಾರರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಅತಿ ಹೆಚ್ಚು ಹಾಲು ನೀಡಿದ ಹೈನುಗಾರರಾದ ಸುಬ್ಬಣ್ಣ ಪೂಜಾರಿ, ಭೀಮ್ ರಾಯ್ ಕಾಮತ್ ಹಾಗೂ ನರಸಿಂಹ ನಾಯ್ಕ ಅವರನ್ನು ಗೌರವಿಸಲಾಯಿತು. ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಧ್ಯಾ, ಸಮೃದ್ಧಿ ಹರ್ಷ ಅವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.