ಗೆಜ್ಜೆಗಿರಿ ಕ್ಷೇತ್ರ ಜಾತ್ರೆ ಆಮಂತ್ರಣ ಬಿಡುಗಡೆ

Ism_Gejjegiri
Published on

ಪುತ್ತೂರು ಗ್ರಾಮಾಂತರ: ದೇಯಿ ಬೈದೆತಿ, ಕೋಟಿ&-ಚೆನ್ನಯರ ಮೂಲಸ್ಥಾನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದಲ್ಲಿ ಮಾ.1ರಿಂದ 5ರ ತನಕ ನಡೆಯುವ ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಕರ ಸಂಕ್ರಮಣ ದಿನವಾದ ಮಂಗಳವಾರ ಗೆಜ್ಜೆಗಿರಿ ಕ್ಷೇತ್ರದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಅಧ್ಯಕ್ಷತೆಯಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಮಾಜಿ ಸಂಸದ ಬಿಡುಗಡೆಗೊಳಿಸಿದರು.

ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ತುಳುನಾಡಿನಲ್ಲಿ ನಾಗರಾಧನೆ ಮತ್ತು ಭೂತರಾಧನೆಯೊಂದಿಗೆ ಕೋಟಿ&-ಚೆನ್ನಯರು ಸೇರುತ್ತಾರೆ. ದೇಯಿ ಬೈದೆತಿ ಅಂಶವುಳ್ಳ ಕೋಟಿ ಚೆನ್ನಯರ ಕ್ಷೇತ್ರದ ಜಾತ್ರೆಯು ಒಂದು ಸಮುದಾಯದ ಜಾತ್ರೆಯಾಗದೆ ತುಳುನಾಡಿನ ಹಿಂದು ಸಮಾಜದ ಜಾತ್ರೆಯಾಗಿ ಪರಿವರ್ತನೆಯಾಗಬೇಕು ಎಂದರು.

ಕಾಂಗ್ರೆಸ್​ ಮುಖಂಡ ಎ. ಹೇಮನಾಥ ಶೆಟ್ಟಿ ಕಾವು, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ವಿಶ್ವ ಹಿಂದು ಪರಿಷತ್​ ಜಿಲ್ಲಾಧ್ಯಕ್ಷ ಶರಣ್​ ಪಂಪ್​ವೆಲ್​, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್​ ಕುಂಪಲ, ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್​.ಸಿ. ನಾರಾಯಣ, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷೆ ವಿದ್ಯಾ ರಾಕೇಶ್​ ಶುಭ ಹಾರೈಸಿದರು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಜಯಂತ್​ ನಡುಬೈಲು, ಮೊಕ್ತೇಸರ ಶ್ರೀಧರ ಪೂಜಾರಿ ಗೆಜ್ಜೆಗಿರಿ, ಸಮಿತಿಯ ಉಪಾಧ್ಯಕ್ಷ ದೀಪಕ್​ ಕೋಟ್ಯಾನ್​ ಗುರುಪುರ, ಕೋಶಾಧಿಕಾರಿ ಮೋಹನ್​ದಾಸ್​ ಬಂಗೇರ ವಾಮಂಜೂರು, ಸಚಿನ್​ ರೈ ಪಾಪೆಮಜಲು ಮತ್ತಿತರರಿದ್ದರು.

ಕ್ಷೇತ್ರಾಡಳಿತ ಸಮಿತಿಯ ಕಾರ್ಯದರ್ಶಿ ಡಾ.ರಾಜಾರಾಮ್​ ಕೆ.ಬಿ ಉಪ್ಪಿನಂಗಡಿ ಸ್ವಾಗತಿಸಿ, ವಂದಿಸಿದರು. ಸಮಿತಿ ಉಪಾಧ್ಯಕ್ಷ ಉಲ್ಲಾಸ್​ ಕೋಟ್ಯಾನ್​ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net