ಗಾಯತ್ರಿ ಜ್ಞಾನಯಜ್ಞ ಮಂಟಪ ಲೋಕಾರ್ಪಣೆ

10 Gudi P-1
ಲೋಕಾರ್ಪಣೆಗೆ ಸಿದ್ಧವಾಗಿರುವ ಗಾಯತ್ರಿ ಜ್ಞಾನಯಜ್ಞ ಮಂಟಪ.
Published on

ನಾಳೆಯಿಂದ 16ರವರೆಗೆ ಗುಡಿಬಂಡೆಯಲ್ಲಿ 37ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ಗುಡಿಬಂಡೆ : ಪಟ್ಟಣದ ಆದಿಶಕ್ತಿ ಶ್ರೀ ಮಾತಾಚಾರ್ಯ ಗಾಯತ್ರಿ ದೇಗುಲದ 37ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಭಕ್ತರ ನೆರವಿನಿಂದ ನಿರ್ಮಾಣವಾಗುತ್ತಿರುವ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮುಚ್ಚಯದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್​ 12ರಿಂದ 16ರವರೆಗೆ ನೆರವೇರಲಿರುವ ಮಹೋನ್ನತ ಸಮಾರಂಭದಲ್ಲಿ ಶ್ರೀಮತಿ ಯಶೋದಮ್ಮ, ಶ್ರೀರಾಮಚಂದ್ರರಾವ್​ ಸ್ಮಾರಕ ವೇದವಿಾನ ಪಾಠಶಾಲೆ ಹಾಗೂ ಗಾಯತ್ರಿ ಾನಯ ಮಂಟಪದ ಲೋಕಾರ್ಪಣೆ ನೆರವೇರಲಿದೆ.

ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಸಮ್ಮುಖದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಗುಡಿಬಂಡೆ ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್​ ಅಧ್ಯ ಡಾ.ಎಸ್​ ಗಿರೀಶ್​ ರಾವ್​ ಮತ್ತು ಪ್ರಧಾನ ಸಂಚಾಲಕ ಸ.ನ.ನಾಗೇಂದ್ರ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಟ್ಟದಿಂದ ಹರಿದು ಬರುವ ಮಳೆನೀರು ಬಳಸಿಕೊಂಡು ಗುಡಿಬಂಡೆ ಪಟ್ಟಣದ ಜನತೆಗೆ ್ಲೋರೈಡ್​ಮುಕ್ತ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಪುರಾತನ ಕಲ್ಯಾಣಿ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ವಿವಿಧ ಹೋಮಗಳು: ವೇದಬ್ರಹ್ಮಶ್ರೀ ಮಂಕಾಲಶ್ರೀ ಹರಿಶರ್ಮಾ ಅಧ್ವರ್ಯದಲ್ಲಿ 5 ದಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಚ್ಛಿಷ್ಠ ಮಹಾಗಣಪತಿ ಹೋಮ, ಗಾಯತ್ರಿ ಹೋಮ, ಸುದರ್ಶನ ಹೋಮ, ಧನ್ವಂತರಿ ಮಹಾವಿಷ್ಣು ಹೋಮ, ರುದ್ರಹೋಮ, ಮೇಧಾ ದಣಾಮೂರ್ತಿ ಹೋಮ, ಪವಮಾನ ಹೋಮ, ರಾಮತಾರಕ ಹೋಮ, ಚಂಡಿಹೋಮ, ಮಹಾಪೂರ್ಣಾಹುತಿ, ಮಹಾಕಲಶಾಭಿಷೇಕ, ಮೂಲದೇವರಿಗೆ ಪುಷ್ಪಾಲಂಕಾರ ಹಾಗೂ ಕೊನೆಯ ದಿನ ಸಾಮೂಹಿಕ ಉಪನಯನ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ಸಮರದೋಪಾದಿಯಲ್ಲಿ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸ.ನ.ನಾಗೇಂದ್ರ ತಿಳಿಸಿದರು.

ಪ್ರತಿದಿನ ಸಂಜೆ ಗಾಯತ್ರಿ ಪ್ರಸಾದ ಭವನ ಮುಖ್ಯ ವೇದಿಕೆಯಲ್ಲಿ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜಗದ್ಗುರು ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ಮಾಧವತೀರ್ಥ ಶ್ರೀಮಠದ ಪೀಠಾಧಿಪತಿಗಳಾದ 108 ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥ ಶ್ರೀಗಳು ಆಗಮಿಸಿ ಅನುಗ್ರಹ ನುಡಿ ಗಳನ್ನಾಡಲಿದ್ದಾರೆ ಎಂದು ಡಾ.ಗಿರೀಶ್​ ತಿಳಿಸಿದ್ದಾರೆ.

ಪಪಂ ಅಧ್ಯಕ್ಷ ವಿಕಾಸ್​, ತಹಶೀಲ್ದಾರ್​ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಗಾಯತ್ರಿ ದೇಗುಲ ಸಮಿತಿ ಪದಾಧಿಕಾರಿ ಮ.ನಾ.ಮಂಜುನಾಥ್​, ವಾಹಿನಿ ಸುರೇಶ್​, ಗುರುಪ್ರಸಾದ್​, ವಿಶ್ವಚಲಪತಿ, ಆರ್​.ಕೆ.ಪ್ರಸಾದ್​, ಶ್ರೀನಾಥ್​, ಶ್ರೀಶಸಿಂಹಭಟ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net