

ಕಿನ್ನಿಗೋಳಿ: ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಸಹಭಾಗಿತ್ವದಲ್ಲಿ ಚಿತ್ರಾಪುರ ಮಠದಲ್ಲಿ ಅಕ್ಟೋಬರ್‌ನಲ್ಲಿ ನಡೆಯುವ ಕೋಟಿ ಗಾಯತ್ರಿ ಜಪ ಹೋಮದ ಪೂರ್ವಭಾವಿಯಾಗಿ ಶಿವಳ್ಳಿ ಸ್ಪಂದನ ಕಟೀಲು ವಲಯದ ಅಷ್ಟ ಮಠಗಳಲ್ಲಿ, ಶಿವಳ್ಳಿ ಸ್ಪಂದನ ಕಟೀಲು ವಲಯದ ಎಲ್ಲ ವಿಪ್ರ ಬಂಧುಗಳ ಹಾಗೂ ಸದಸ್ಯರ ಒಗ್ಗೂಡುವಿಕೆಯಿಂದ ಗಾಯತ್ರಿ ಜಪ ಸಪ್ತಾಹ ಆಯೋಜಿಸಲಾಗಿದೆ. ಶಿವಳ್ಳಿ ಸ್ಪಂದನ ಕಟೀಲು ವಲಯದ ಗಾಯತ್ರಿ ಜಪ ಸಪ್ತಾಹದ ಅಂಗವಾಗಿ ಕಿಲೆಂಜೂರು ಸಮೀಪದ ಕಾಯಿಮಠದಲ್ಲಿ ಸಾಮೂಹಿಕ ಗಾಯತ್ರಿ ಜಪ ನಡೆಯಿತು. ಕಟೀಲು ಹರಿನಾರಾಯಣದಾಸ ಆಸ್ರಣ್ಣ ದೀಪ ಪ್ರಜ್ವಲನ ಮಾಡಿ ಆಶೀರ್ವಚನಗೈದರು. ಮಠದ ಅರ್ಚಕ ಹರಿ ಉಡುಪ ಫಲನ್ಯಾಸ ಮಾಡಿದರು. ಬೈಲು ವೆಂಕಟರಾಜ ಉಡುಪ ದೇವತಾ ಪ್ರಾರ್ಥನೆಗೈದರು. ಸುಬ್ರಹ್ಮಣ್ಯಪ್ರಸಾದ್, ಅನಂತಪದ್ಮನಾಭ ಆಚಾರ್ಯ, ರಾಮಚಂದ್ರ ಉಡುಪ, ಕದ್ರಿ ಕೃಷ್ಣ ಭಟ್, ರಘುರಾಮ ರಾವ್, ನಾರಾಯಣ ಉಡುಪ, ಡಾ.ಗುರುರಾಜ ಉಡುಪ ಮೊದಲಾದವರಿದ್ದರು.