

ಮೂಡುಬಿದಿರೆ: ಶಾಸಕರ ಶಿಫಾರಸಿನ ಮೇರೆಗೆ ಎಂಆರ್ಪಿಎಲ್ ಸಂಸ್ಥೆಯ ಸಿಎಸ್ಆರ್ ನಿಧಿಯಲ್ಲಿ ಮೂಡುಬಿದಿರೆ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಚ್ಚುವರಿ ಕೊಠಡಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಶಾಲೆಯ ಅವಶ್ಯಕತೆಯನ್ನು ಗಮನಿಸಿ ಎಂಆರ್ಪಿಎಲ್ ಸಂಸ್ಥೆಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು ಎಂದರು.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ವಾರ್ಡ್ ಸದಸ್ಯೆ ದಿವ್ಯಾ ಜಗದೀಶ್, ಹಿರಿಯರಾದ ಸುಬ್ಬಣ್ಣ, ಗುತ್ತಿಗೆದಾರ ಸಮಾಜ ಸೇವಕ ಸುಕೇಶ್ ಶೆಟ್ಟಿ, ನೇತಾಜಿ ಬ್ರಿಗೇಡ್ನ ರಾಹುಲ್ ಕುಲಾಲ್, ಎಸ್ಡಿಎಂಸಿ ಅಧ್ಯಕ್ಷೆ ಸುನೀತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾರ ಮುಖ್ಯಶಿಕ್ಷಕಿ ಕಸ್ತೂರಿ ಸ್ವಾಗತಿಸಿದರು. ಸಹಶಿಕ್ಷಕಿ ಭವ್ಯಾ ನಿರೂಪಿಸಿದರು.