ಗಾಯನ ಸಮಾಜದ ಅಧ್ಯಕ್ಷರಾಗಿ ಎಂ.ಆರ್.ವಿ. ಪ್ರಸಾದ್

MRV
Published on

ಬೆಂಗಳೂರು : ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷರಾಗಿ ಎಂ.ಆರ್.ವಿ. ಪ್ರಸಾದ್ ಚುನಾಯಿತರಾಗಿದ್ದಾರೆ.

ಕಾರ್ಯಕಾರಿ ಸಮಿತಿಯ 118ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಅಚ್ಯುತ ರಾವ್ ಪದಕಿ, ಗೌರವ ಕಾರ್ಯದರ್ಶಿಯಾಗಿ ಕ. ನಾಗರಾಜ್, ಜಂಟಿ ಕಾರ್ಯದರ್ಶಿಯಾಗಿ ವಿದ್ವಾನ್ ಪಿ. ಶ್ರೀನಿವಾಸ ಮೂರ್ತಿ, ಖಜಾಂಚಿಯಾಗಿ ಜಿ.ಕೆ. ವೇಣು, ಆಂತರಿಕ ಲೆಕ್ಕ ಪರಿಶೋಧಕರಾಗಿ ಕೆ.ಎಸ್. ಹನುಮಂತರಾವ್, ಸದಸ್ಯರಾಗಿ ಎಸ್.ಎಸ್. ಪ್ರಸಾದ್, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮಾ, ಕೌಸಲ್ಯ ಮೂರ್ತಿ, ಜ್ಯೋತಿ ಪುತ್ತುರಾಯ, ಬಿ. ಶ್ರೀಪ್ರಿಯ ಚುನಾಯಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net