

ಬೆಂಗಳೂರು: ಬೆಂಗಳೂರಿನ ಯಕ್ಷಪ್ರಿಯರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಇದೇ ಮೊದಲ ಬಾರಿಗೆ ಟೀಮ್ ತಿತೈತೈ ಬೆಂಗಳೂರಿನಲ್ಲಿ ವೃತ್ತಿರಂಗಭೂಮಿಯ ಯಕ್ಷಗಾನ ಕಲಾವಿದರುಗಳನ್ನು ಹಾಗೂ ಅವರ ತಂಡಗಳನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನ ಮಾಡಿದೆ.
80 ಕ್ಕೂ ಹೆಚ್ಚು ಬೆಂಗಳೂರಿನ ಹವ್ಯಾಸಿ ಕಲಾವಿದರುಗಳನ್ನು, 20ಕ್ಕೂ ಹೆಚ್ಚು ತಂಡಗಳನ್ನು, 25ಕ್ಕೂ ಅಧಿಕ ಯಕ್ಷಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಬೆಂಗಳೂರಿನ ಯಕ್ಷ ತಂಡಗಳ ಸ್ನೇಹ ಕೂ(ಡಾ)ಟ ಎಂಬ ಹೆಸರಿನಲ್ಲಿ ಇದೇ ಡಿ.7 (ಶನಿವಾರ)ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ರಾತ್ರಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ಬೆಂಗಳೂರಿನ ಮಟ್ಟಿಗೆ ಹೊಸ ಹೆಜ್ಜೆ.
ಇಲ್ಲಿ ಪೂರ್ವರಂ (ತೆಂಕು) ಧರ್ಮಾಂಗಧ ದಿಗ್ವಿಜಯ, ಸೇತು ಬಂಧನ, ಕರ್ಣಾರ್ಜುನ ಕಾಳಗ, ದಕ್ಷಯಜ್ಞ, ಭಕ್ತ ಸುಧನ್ವ ಮತ್ತು ಮೀನಾಕ್ಷಿ ಕಲ್ಯಾಣ ಎಂಬ ಒಟ್ಟು ಆರು ಪೌರಾಣಿಕ ಪ್ರಸಂಗಗಳ ಕಲಾವಿದರುಗಳ ಸಮಾಗಮವಾಗಲಿದೆ.
ಕಲಾವಿದರಾದ ಪ್ರಿಯಾಂಕ ಮೋಹನ್, ನಿಹಾರಿಕ ಭಟ್, ರವೀಶ್ ಹೆಗಡೆ, ಎ.ಪಿ ಫಾಟಕ್, ಶಂಕರ್ ಬಾಳ್ಕುದ್ರು, ಸುಬ್ರಾಯ ಹೆಬ್ಬಾರ್, ಶಶಿರಾಜ ಸೋಮಯಾಜಿ, ಅಂಬರೀಷ್ ಭಟ್, ರವಿ ಮಡೋಡಿ, ನವೀನ್ ಶೆಟ್ಟಿ, ಪ್ರಶಾಂತ್ ವರ್ಧನ, ನಾಗಶ್ರೀ ಗೀಜಗಾರ್ ಮುಂತಾದವರು ಭಾಗವಹಿಸಲಿದ್ದಾರೆ.
ಯಕ್ಷ ಗುರುಗಳಾದ ಶಿವಕುಮಾರ್ ಬೇಗಾರ್ , ಕೃಷ್ಣಮೂರ್ತಿ ತುಂಗ , ರಾಧಾಕೃಷ್ಣ ಉರಾಳ, ಶಂಕರ್ ಬಾಳ್ಕುದ್ರು, ಸುಬ್ರಾಯ ಹೆಬ್ಬಾರ್, ಪ್ರಸನ್ನ ಮಾಗೋಡು, ಪ್ರಸಾದ್ ಚೇರ್ಕಾಡಿ, ಮನೋಜ್ ಭಟ್ , ಅರ್ಪಿತಾ ಹೆಗಡೆ, ಅಶ್ವಿನಿ ಕೊಂಡದಕುಳಿ, ಶ್ರೀನಿಧಿ ಹೊಳ್ಳ ಸೇರಿ ಹಲವರನ್ನು ಗೌರವಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 6362673283 ಸಂಪರ್ಕಿಸಬಹುದು.