ಕ್ರೈಸ್ಟ್ ಅಕಾಡೆಮಿಯ ಗ್ರೀನ್ ರನ್; ಫಿಟ್ನೆಸ್ ಮತ್ತು ಸುಸ್ಥಿರತೆಯತ್ತ ಒಂದು ಹೆಜ್ಜೆ

run
Published on

ಬೆಂಗಳೂರು: ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ (ಸಿಎಐಎಎಸ್) ಫಿಟ್‌ನೆಸ್ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸಲು ಸೋಮವಾರ ಗ್ರೀನ್ ರನ್ ಆಯೋಜಿಸಿತ್ತು.

7 ಕಿ.ಮೀ. ಓಟವು ಸಿಎಐಎಎಸ್ ಕ್ಯಾಂಪಸ್‌ನಿಂದ ಎಲೆಕ್ಟ್ರಾನಿಕ್‌ಸಿಟಿಯ ವೇಲಂಕಣಿ ಟೆಕ್ ಪಾರ್ಕ್‌ವರೆಗೆ ಸಾಗಿತು. ಎಲ್ಲಾ ವಯಸ್ಸಿನ ಜನರು ಉತ್ಸಾಹದಿಂದ ಈ ಓಟದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಮುನ್ನ ಕ್ರೈಸ್ಟ್ ಗ್ರೂಪ್ ನಿರ್ದೇಶಕ ಸೆಬಿ ಪಾಲಮಟ್ಟತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಹೆಲ್ತ್‌ನ ಡಾ. ಪ್ರಶಾಂತ್ ಬಿ.ಎನ್. ಓಟದ ಪೂರ್ವ ಮಾಹಿತಿ ನೀಡಿದರು. ನಂತರ ಓಟದ ರಾಯಭಾರಿ ಹನನ್ ಡೆಲ್ವಿ ಓಟಕ್ಕೆ ಚಾಲನೆ ನೀಡಿದರು.

ಓಟದಲ್ಲಿ ಪಾಲ್ಗೊಂಡಿದ್ದ ಎಸ್‌ಸಿಇಎಡಿ ೌಂಡೇಶನ್ ಸಂಸ್ಥಾಪಕ ಸಿಜು ಡೇನಿಯಲ್ ಜೆಲ್ಲಿ ಮೆಷಿನ್ ಪ್ರದೇಶದ ಬಳಿ ಗಿಡ ನೆಡುವ ಮೂಲಕ ಪರಿಸರ ಕಾಳಜಿಯನ್ನು ಮೆರೆದರು. ಈ ವೇಳೆ ದಕ್ಷಿಣ ಬೆಂಗಳೂರು ಅರಣ್ಯಾಧಿಕಾರಿ ಸಂತೋಷ್ ಉಪಸ್ಥಿತರಿದ್ದರು.

ವೆಲಂಕಣಿ ಟೆಕ್ ಪಾರ್ಕ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಫಾ.ಆಂಟೋನಿ ಡೇವಿಸ್, ನಾರಾಯಣ ಹೆಲ್ತ್‌ನ ಡಾ. ಪ್ರವೀಣ್ ಪಿ. ವಿಜೇತರಿಗೆ ನಗದು ಬಹುಮಾನ ಮತ್ತು ಪದಕಗಳನ್ನು ವಿತರಿಸಿದರು. ಓಟದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಟಿಶರ್ಟ್ ಹಾಗೂ ಪದಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net