ಅನಿಲ ಸೋರಿಕೆ ಮನೆಗೆ ಬೆಂಕಿ

705ac489-dbb5-4d5a-9b3e-05ea4f0ba6f8-1.jpg
Published on

ಬಿಡದಿ: ಸಿಲಿಂಡರ್ ನಿಂದ ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತುಕೊಂಡು ಮನೆಯ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ಕೇತಗಾನಹಳ್ಳಿ ರಸ್ತೆ ರಾಘವೇಂದ್ರ ಬಡಾವಣೆಯ ಉಮೇಶ್ ಅವರ ಮನೆಯಲ್ಲಿ ಗ್ಯಾಸ್ ಲೀಕ್ ಆಗಿ ಬೆಳಿಗ್ಗೆ 6.30 ಗಂಟೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ‌. ಮನೆಯಲ್ಲಿದ್ದ ಟಿವಿ,ಸೋಫಾ ಸೆಟ್, ಮಂಚ ಸೇರಿದಂತೆ ಇನ್ನೂ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.
ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

ಉಮೇಶ್ ರವರ ತಾಯಿ ನಂಜಮ್ಮರವರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ .

ಬಿಡದಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net