ದಾವಣಗೆರೆಯಲ್ಲಿ ಇಂದಿನಿಂದ ಗಾರ್ನಿಯರ್ ಉಚಿತ ಪ್ರಚಾರ ಕ್ಯಾಂಪೇನ್

gar
Published on

ದಾವಣಗೆರೆ : ರಾಜ್ಯದ ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಹೇರ್ ಕಲರ್ ಕಂಪನಿಯಿಂದ ಗಾರ್ನಿಯರ್ ಪ್ರಚಾರದ ಕ್ಯಾಂಪೇನ್ ನಗರದ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾಂಗಣದಲ್ಲಿ ಮೇ 27 ರಂದು ಬೆಳಗ್ಗೆ 10ಕ್ಕೆ ಆರಂಭವಾಗಲಿದೆ.

ರೋಟರಿ ಕ್ಲಬ್ ಸಹಕಾರದಲ್ಲಿ ಆಯೋಜಿಸಿರುವ ಕ್ಯಾಂಪೇನ್ ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷೆ ಕುಸುಮಾ ವಿಜಯಾನಂದ, ಕಾರ್ಯದರ್ಶಿ ಸುನೀತಾ ಮೃತ್ಯುಂಜಯ, ಪಬ್ಲಿಕ್ ರಿಲೇಷನ್/ ಇಮೇಜ್ ಡೈರೆಕ್ಟರ್ ಆರ್. ಟಿ. ಮೃತ್ಯುಂಜಯ ಪಾಲ್ಗೊಳ್ಳಲಿದ್ದಾರೆ.

ಕ್ಯಾಂಪೇನ್ ಉಚಿತವಾಗಿದ್ದು, ಸ್ತ್ರೀಯರು, ಪುರುಷರು ಸೇರಿ ಪ್ರತಿದಿನ 100 ಮಂದಿಗೆ ಹೇರ್ ಕಲರ್ ಮಾಡಲಾಗುವುದು. ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ಈ ಕ್ಯಾಂಪೇನ್‌ಗೆ ರೋಟರಿ ಕ್ಲಬ್ ಸಹಕಾರ ನೀಡಿದೆ. ಮೇ 31 ರ ವರೆಗೆ ಕ್ಯಾಂಪೇನ್ ನಡೆಯಲಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net