ಬಸ್​ ಡಿಕ್ಕಿ, ತಾಯಿ-ಮಗಳು ಸಾವು

Bus_Accident
Published on

ತಿಪಟೂರು: ಗಾರ್ಮೆಂಟ್​ ಬಸ್​ ಡಿಕ್ಕಿ ಹೊಡೆದು ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಟನೆ ಸೋಮವಾರ ನಡೆದಿದೆ.

ಕಮಲಮ್ಮ35), ವೀಣಾ (16) ಮೃತ ದುರ್ದೈವಿಗಳು. ತಾಲೂಕಿನ ರಾಮಶೆಟ್ಟಿಹಳ್ಳಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಅವಡ ನಡೆದಿದೆ. ಸೋಮವಾರ ಬೆಳಗ್ಗೆ ಮಗಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದ ಕಮಲಮ್ಮಗೆ ಹಿಂಬದಿಯಿಂದ ಬಂದ ಗಾರ್ಮೆಂಟ್ಸ್​ ಬಸ್​ ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೀಣಾ 10ನೇ ತರಗತಿ ಓದುತ್ತಿದ್ದರು.

ಮತ್ತೊಬ್ಬ ಬೈಕ್​ ಸವಾರ ಮುದ್ದಪ್ಪ (50) ಸಹ ಗಾಯಗೊಂಡಿದ್ದು ಗಾಯಾಳುವನ್ನ ತಿಪಟೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ: ಎನ್​ಎಚ್​ಎಐ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಬ್ಬರ ಅಪಘಾತದಲ್ಲಿ ಬಲಿಯಾಗಿದ್ದು ಈ ಸಾವಿಗೆ ಯಾರು ಹೊಣೆ ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಮೃತದೇಹಗಳನ್ನ ರಸ್ತೆಯಲ್ಲಿಟ್ಟು ಪ್ರತಿಭಟನೆಗೆ ಮುಂದಾದ ಸ್ಥಳಿಯರನ್ನು ಪೊಲೀಸರು ತಡೆಯಲು ಮುಂದಾದಾಗ ಸಾರ್ವಜನಿಕರು ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ. ಹಲವು ಬಾರಿ ಅಂಡರಪಾಸ್​ ನಿರ್ಮಿಸುವಂತೆ ಮನವಿ ಮಾಡಿದರು ಅಧಿಕಾರಿಗಳು ರ್ನಿಲಕ್ಷ$್ಯ ತೋರಿದ್ದಾರೆ. ಸ್ಥಳಕ್ಕೆ ಬರುವವರೆಗು ಮೃತದೇಹಗಳನ್ನು ಎತ್ತಲು ಬಿಡುವುದಿಲ್ಲ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net