ವಸತಿ, ವಸತಿಯೇತರ ಸ್ವತ್ತುಗಳಿಗೆ ಕಸ ಶುಲ್ಕ ಪ್ರಕಟ: ಕಟ್ಟಡದ ವಿಸ್ತೀರ್ಣ ಆಧಾರದಲ್ಲಿ ಆಸ್ತಿ ತೆರಿಗೆ ಜೊತೆ ಸಂಗ್ರಹ

bbmp
Published on

ಬೆಂಗಳೂರು: ಡೀಸೆಲ್​, ವಿದ್ಯುತ್​ ಸೇರಿ ವಿವಿಧ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿರುವ ರಾಜಧಾನಿ ಜನತೆಗೆ ಬಿಬಿಎಂಪಿ ಶಾಕ್​ ಕೊಟ್ಟಿದ್ದು, 2025-26ನೇ ಸಾಲಿನಿಂದ ನತ್ಯಾಜ್ಯ ನಿರ್ವಹಣಾ ಬಳಕೆದಾರರ/ ಸೇವಾ ಶುಲ್ಕವನ್ನು ಆಸ್ತಿ ತೆರಿಗೆ ಜೊತೆಯಲ್ಲಿ ಸಂಗ್ರಹಿಸಲು ಅಧಿಕೃತ ಆದೇಶವನ್ನು ಸೋಮವಾರ ಹೊರಡಿಸಿದೆ.

ವಸತಿ, ವಸತಿಯೇತರ ಸ್ವತ್ತುಗಳಿಗೆ, ಖಾಲಿ ನಿವೇಶನ/ ಜಮೀನಿಗೆ, ಹೋಟೆಲ್​, ಲಾಡ್ಜ್​ ಮತ್ತು ತಾರಾ ಹೋಟೆಲ್​ ಉಪಯೋಗದ ಸ್ವತ್ತುಗಳಿಗೆ ವಿಸ್ತೀರ್ಣದ ಆಧಾರದಲ್ಲಿ ಘನತ್ಯಾಜ್ಯ ನಿರ್ವಹಣಾ ಶುಲ್ಕವನ್ನು ನಿಗದಿಪಡಿಸಲಾಗಿದೆ. ಶುಲ್ಕವು ಆಸ್ತಿ ತೆರಿಗೆಯ ಶೇ.60ಗಿಂತ ಹೆಚ್ಚಾದಲ್ಲಿ ಶೇ.60ಕ್ಕೆ ಮಿತಿಗೊಳಿಸಲಾಗಿದೆ. ಬಾಡಿಗೆ ಉಪಯೋಗದ ಸ್ವತ್ತುಗಳಿಗೆ ಶುಲ್ಕವು ಆಸ್ತಿ ತೆರಿಗೆಯ ಶೇ.30ಗಿಂತ ಅಧಿಕವಾದಲ್ಲಿ ಶೇ.30ಕ್ಕೆ ಮಿತಿಗೊಳಿಸಲಾಗಿದೆ. ಖಾಲಿ ನಿವೇಶನ ಅಥವಾ ಜಮೀನಿನ ಪ್ರತಿ ಚದರ ಅಡಿಗೆ ವರ್ಷಕ್ಕೆ 60 ಪೈಸೆ ಶುಲ್ಕ ನಿಗದಿಪಡಿಸಲಾಗಿದೆ. ವಸತಿ ಮತ್ತು ವಸತಿಯೇತರ ಸ್ವತ್ತುಗಳಿಗೆ ತಿಂಗಳಿಗೆ, ವಸತಿಯೇತರ ಉಪಯೋಗದ ವರ್ಗ& ಹೋಟೆಲ್​, ಲಾಡ್ಜ್​, ತಾರಾ ಹೋಟೆಲ್​ಗಳಿಗೆ ವರ್ಷಕ್ಕೆ ಶುಲ್ಕವನ್ನು ವಿಧಿಸಲಾಗಿದೆ.

4 ಸಾವಿರ ಟನ್​ ಕಸ ಉತ್ಪತ್ತಿ: ರಾಜಧಾನಿಯಲ್ಲಿ ನಿತ್ಯ 4 ಸಾವಿರಕ್ಕೂ ಅಧಿಕ ಟನ್​ ಒಣ, ಹಸಿ ಕಸ ಉತ್ಪತ್ತಿಯಾಗುತ್ತಿದೆ. ಬಿಬಿಎಂಪಿಯು ತ್ಯಾಜ್ಯ ವಿಲೇವಾರಿಗಾಗಿ ಪ್ರತಿ ವರ್ಷ ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಕಸವನ್ನು ಕ್ವಾರಿಗಳು, ಜಮೀನಿನಲ್ಲಿ ಹುದುಗಿಸಲಾಗುತ್ತಿದೆ. ಶೇ. 40 ಮಾತ್ರ ವಿಂಗಡಣೆಯಾಗುತ್ತಿದೆ. ಕಸದಿಂದ ವಿದ್ಯುತ್​, ಜೈವಿಕ ಅನಿಲ ಉತ್ಪಾದಿಸುವ ತಂತ್ರಾನಗಳು ನಮ್ಮಲ್ಲಿದ್ದರೂ, ಬಳಸುವ ಪ್ರಯತ್ನ ನಡೆದಿಲ್ಲ.

ವಸತಿ ಸ್ವತ್ತುಗಳ ಕಸದ ಶುಲ್ಕದ ವಿವರ

ಕಟ್ಟಡ ವಿಸ್ತೀರ್ಣ (ಚದರ ಅಡಿ)          ತಿಂಗಳಿಗೆ (ರೂ.ಗಳಲ್ಲಿ)

600 ಚದರ ಅಡಿವರೆಗೆ                        10

601ರಿಂದ 1,000                             50

1,001ರಿಂದ 2,000                          100

2,001ರಿಂದ 3,000                         150

3,001 ರಿಂದ 4,000                        200

4 ಸಾವಿರ ಚದರ ಅಡಿಗಳಿಗೂ ಮೇಲ್ಪಟ್ಟು 400

ವಸತಿಯೇತರ ಸ್ವತ್ತುಗಳಿಗೆ ಶುಲ್ಕದ ವಿವರ

ಕಟ್ಟಡ ವಿಸ್ತೀರ್ಣ (ಚದರ ಅಡಿ)                  ತಿಂಗಳಿಗೆ (ರೂ.ಗಳಲ್ಲಿ)

1,000 ಚದರ ಅಡಿವರೆಗೆ                             2 ಸಾವಿರ

1001ರಿಂದ 2 ಸಾವಿರ                                 6 ಸಾವಿರ

2001ರಿಂದ 5 ಸಾವಿರ                                14 ಸಾವಿರ

5001ರಿಂದ 10 ಸಾವಿರ                               38 ಸಾವಿರ

10,001ರಿಂದ 20 ಸಾವಿರ                           70 ಸಾವಿರ

20,001ರಿಂದ 50 ಸಾವಿರ                           1.50 ಲಕ್ಷ

50,001ರಿಂದ 1 ಲಕ್ಷ                                  2.75 ಲಕ್ಷ

1,00,001ರಿಂದ 2 ಲಕ್ಷ                                5 ಲಕ್ಷ

2,00,001ರಿಂದ 5 ಲಕ್ಷ                               13 ಲಕ್ಷ

5 ಲಕ್ಷ ಚದರ ಅಡಿಗೂ ಮೇಲ್ಪಟ್ಟು                      35 ಲಕ್ಷ

ವಸತಿಯೇತರ ಉಪಯೋಗದ ವರ್ಗ-ಹೋಟೆಲ್​, ಲಾಡ್ಜ್​ ಸ್ವತ್ತುಗಳಿಗೆ

ಕಟ್ಟಡ ವಿಸ್ತೀರ್ಣ (ಚದರ ಅಡಿ)                       ವರ್ಷಕ್ಕೆ (ರೂ.ಗಳಲ್ಲಿ)

ಸಾವಿರ ಚದರ ಅಡಿವರೆಗೆ                              4 ಸಾವಿರ

1001ರಿಂದ 2 ಸಾವಿರ                                    12 ಸಾವಿರ

2001ರಿಂದ 5 ಸಾವಿರ                                 28 ಸಾವಿರ

5001ರಿಂದ 10 ಸಾವಿರ                               76 ಸಾವಿರ

10001ರಿಂದ 20 ಸಾವಿರ                             1.40 ಲಕ್ಷ

20001ರಿಂದ 50 ಸಾವಿರ                              3 ಲಕ್ಷ

50001ರಿಂದ 1 ಲಕ್ಷ                                   5.50 ಲಕ್ಷ

100001ರಿಂದ 2 ಲಕ್ಷ                                    10 ಲಕ್ಷ

200001ರಿಂದ 5 ಲಕ್ಷ                                    26 ಲಕ್ಷ

5 ಲಕ್ಷ ಚ.ಅಡಿಗಳಿಗಿಂತ ಮೇಲ್ಪಟ್ಟು                  70 ಲಕ್ಷ

ವಸತಿಯೇತರ ಉಪಯೋಗದ ವರ್ಗ-ತಾರಾ ಹೋಟೆಲ್​ಗಳಿಗೆ

ಕಟ್ಟಡ ವಿಸ್ತೀರ್ಣ (ಚದರ ಅಡಿ)                        ವರ್ಷಕ್ಕೆ (ರೂ.ಗಳಲ್ಲಿ)

10,000 ಚದರ ಅಡಿವರೆಗೆ                           95ಸಾವಿರ

10,001ರಿಂದ 20 ಸಾವಿರ                        1.75 ಲಕ್ಷ

20,001ರಿಂದ 50 ಸಾವಿರ                        3.75 ಲಕ್ಷ

50,001ರಿಂದ 1 ಲಕ್ಷ                                 6,87,500

1,00,001ರಿಂದ 2 ಲಕ್ಷ                              12.50 ಲಕ್ಷ

2,00,001ರಿಂದ 5 ಲಕ್ಷ                                32.50 ಲಕ್ಷ

5 ಲಕ್ಷ ಚದರ ಅಡಿಗಿಂತ ಮೇಲ್ಪಟ್ಟು                87.50 ಲಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net