

ಬೆಂಗಳೂರು: ಪೌರಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್ ಹಾಗೂ ಸ್ವಚ್ಛ ಸಿಬ್ಬಂದಿಯ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಕಾಯಂಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಸೋಮವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಕೆಲ ಪೌರಕಾರ್ಮಿಕರನ್ನು ಈಗಾಗಲೇ ಕಾಯಂ ಮಾಡಲಾಗಿದೆ. ಇನ್ನೂ ಕೆಲವರು ಕಾಯಂ ಮಾಡಿಲ್ಲ. ಹಾಗಾಗಿ, ಮೇ.1ರ ಕಾರ್ಮಿಕ ದಿನಾಚರಣೆ ದಿನದಂದು ಇತರ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಿ ಪತ್ರ ವಿತರಿಸಲಾಗುವುದು. ಅಲ್ಲದೆ, ಕಸ ಸಾಗಿಸುವ ವಾಹನ ಚಾಲಕರು, ಲೋಡರ್ಸ್, ಸ್ವಚ್ಛ ಸಿಬ್ಬಂದಿಯ ಗುತ್ತಿಗೆ ಪದ್ಧತಿಯನ್ನೂ ರದ್ದುಗೊಳಿಸಿ ನೇರ ನೇಮಕಾತಿ ವ್ಯವಸ್ಥೆ ತರಲಾಗುವುದು. ಒಳಚರಂಡಿಯಲ್ಲಿ ಕೆಲಸ ಮಾಡುವವರನ್ನೂ ಕಾಯಂ ಮಾಡುತ್ತೇವೆ. ಸಿಂಧುತ್ವದ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಅನುಕಂಪದ ಆಧಾರದ ಮೇಲೆ ಕೆಲಸ ನೀಡುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ಒಟ್ಟಿನಲ್ಲಿ ನಿಮ್ಮ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಇತರರು ಬರುವುದು ಕಡಿಮೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ.ಪೌರಕಾರ್ಮಿಕರ ಬೇಡಿಕೆಗಳ ಪೈಕಿ ಈಗಾಗಲೇ ಕೆಲವೊಂದು ಈಡೇರಿಸಿದ್ದೇವೆ. ಇನ್ನೂ ಕೆಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಅಸಮಾನತೆ ಹೋಗಲಾಡಿಸಿ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂಬುದು ಸರ್ಕಾರದ ಆಶಯ. ಅಮಾನವೀಯವಾಗಿ ನೋಡುವ ಕೆಲಸ ಆಗಬಾರದು. ಸಮಸಮಾಜ ನಿರ್ಮಾಣವಾದರೆ ಮಾತ್ರ ಅಸಮಾನತೆ ನಿವಾರಣೆಯಾಗುತ್ತದೆ ಎಂದು ಸಿಎಂ ತಿಳಿಸಿದರು.
ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಮಹಾ ಸಂಘದ ಅಧ್ಯಕ್ಷ ನಾರಾಯಣ್ ಸೇರಿ ಮತ್ತಿತರರಿದ್ದರು.
ನಗದು ರಹಿತ ಆರೋಗ್ಯ ಕಾರ್ಡ್: ಪೌರ ಕಾರ್ಮಿಕ ಸಮುದಾಯಕ್ಕೆ ನಗದು ರಹಿತ ಆರೋಗ್ಯ ಕಾರ್ಡ್ ನೀಡಲಾಗುವುದು. ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಪಾಲಿಕೆಯಿಂದಲೇ ವೇತನವನ್ನು ನೀಡಬೇಕೆಂದು ತೀರ್ಮಾನ ಮಾಡಿದ್ದು ನಮ್ಮ ಸರ್ಕಾರ. ಪೌರ ಕಾರ್ಮಿಕರ ವೇತನವನ್ನು 7 ಸಾವಿರ ರೂ.ನಿಂದ 17 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ಮೈಸೂರಿನಲ್ಲಿ 524 ಮನೆಗಳನ್ನು ಕೊಡಿಸಿ ಒಂದು ಮನೆಗೆ 6.5 ಲಕ್ಷ ರೂ.ಹಣವನ್ನು ಉಚಿತವಾಗಿ ನೀಡುತ್ತಿರುವುದು ನಮ್ಮ ಸರ್ಕಾರ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಪೌರ ಕಾರ್ಮಿಕ ಸಮುದಾಯವೂ ವಿಶ್ವ ಪ್ರೆ ಬೆಳೆಸಿಕೊಳ್ಳಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಲಿ, ಪೌರ ಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವಗಳೂ ಪವಿತ್ರವೇ. ನಿಮಗೂ ವೃತ್ತಿಗೌರವ, ಘನತೆ ಸಿಗಬೇಕು. ಇದಕ್ಕಾಗಿ ಸೇವೆ ಕಾಯಂ ಮಾಡಲಾಗುವುದು. ಪೌರ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಬೇಕು. ವಿದ್ಯಾವಂತರಾದರೆ ಮಾತ್ರ ಸ್ವಾಭಿಮಾನಿಗಳಾಗಲು ಸಾಧ್ಯ. ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಣ ಕೊಡಿಸಬೇಕು. ಯಾವುದೇ ಕೆಲಸ ಮಾಡಿದ್ದರೂ ಸ್ವಾಭಿಮಾನದಿಂದ ಬದುಕಬೇಕು. ನಾನು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಪ್ರತಿ ವರ್ಷ ಒಂದು ಸಾವಿರ ಪೌರಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸುವ ಕುರಿತು ಘೋಷಿಸಿದ್ದೆ. ಆದ್ದರಿಂದ, ಪ್ರತಿ ವರ್ಷ ಪೌರಕಾರ್ಮಿಕರು ವಿದೇಶಕ್ಕೆ ಹೋಗಿ ಬರುತ್ತಿದ್ದಾರೆ.
ಪೌರಕಾರ್ಮಿಕರ ಕಲ್ಯಾಣಕ್ಕೆ 730 ಕೋಟಿ: ಈ ಬಾರಿಯ ಬಿಬಿಎಂಪಿ ಬಜೆಟ್ನಲ್ಲಿ ಪೌರಕಾರ್ಮಿಕರ ವೇತನ ಪಾವತಿಗೆ 500 ಕೋಟಿ ರೂ. ೂಷಣೆ ಮಾಡಲಾಗಿದೆ. 107 ಕೋಟಿ ರೂ. ಪಿಂಚಣಿಗೆ, ಮೃತಪಟ್ಟವರ ಹೆಸರಿನಲ್ಲಿ 10 ಲ ರೂ. ಮೀಸಲಿಡಲಾಗಿದೆ. 6 ಸಾವಿರ ರೂ.ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಒಟ್ಟಿನಲ್ಲಿ ಪೌರಕಾರ್ಮಿಕರಿಗಾಗಿ ಬಿಬಿಎಂಪಿಯಿಂದ 730 ಕೋಟಿ ರೂ. ಹಣ ಮೀಸಲಿಟ್ಟಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಶೂ, ಕೈಗವಸು ಸೇರಿ ಇತರೇ ಸಲಕರಣೆಗಳ ವಿತರಣೆಗೆ 5 ಕೋಟಿ ರೂ., ಸಮವಸಕ್ಕೆ 6 ಕೋಟಿ ರೂ, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಮರುಪಾವತಿಗೆ 6 ಕೋಟಿ ರೂ, ಆರೋಗ್ಯಕ್ಕೆ 4 ಕೋಟಿ ರೂ, ಒಂಟಿ ಮನೆಗೆ ಪ್ರತ್ಯೇಕವಾಗಿ 30 ಕೋಟಿ ರೂ, ಕೌಶಲ ಅಭಿವೃದ್ದಿಗೆ 5 ಕೋಟಿ ರೂ,ಟ್ಯಾಕ್ಸಿ, ಆಟೋ ಚಾಲಕರಿಗೆ 10 ಕೋಟಿ ಹಣ ಇಡಲಾಗಿದೆ. ಕೆಲಸ ಖಾಯಂ ಆದ ತಣ 50 ಸಾವಿರ ರೂ.ಗೆ ವೇತನ ಮುಟ್ಟುತ್ತದೆ ಎಂದರು.
ಸಮಾವೇಶದಲ್ಲಿಯೇ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ನೀಡಬೇಕೆಂಬ ಆಲೋಚನೆ ಇತ್ತು. ಆದರೆ, ಸಿಂದುತ್ವ ಬಾಕಿ ಇರುವ ಕಾರಣ ಮೇ.1 ರಂದು ನೇಮಕಾತಿ ಪತ್ರ ನಿಮ್ಮ ಕೈ ಸೇರಲಿದೆ. ಸಿಂಧುತ್ವ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು.
| ಡಿ.ಕೆ.ಶಿವಕುಮಾರ್, ಡಿಸಿಎಂ.