ದೈವಾನುಗ್ರಹದಿಂದ ಗರಡಿ ಸಂಭ್ರಮ ಯಶಸ್ವಿ, ಕಂಕನಾಡಿ ಗರಡಿ ಕ್ಷೇತ್ರದ ಗರಡಿ ಸಂಭ್ರಮದಲ್ಲಿ ಶ್ರಮಿಸಿದ ಸಮಿತಿ ಹಾಗೂ ಸಾರ್ವಜನಿಕರಿಗೆ ಕೃತಜ್ಞತಾ ಸಭೆಯಲ್ಲಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಹೇಳಿಕೆ

Mng-mar12garodi
ಕಂಕನಾಡಿ ಗರಡಿ ಕ್ಷೇತ್ರದ ಗರಡಿ ಸಂಭ್ರಮದಲ್ಲಿ ಶ್ರಮಿಸಿದ ಸಮಿತಿ ಹಾಗೂ ಸಾರ್ವಜನಿಕರಿಗೆ ಕೃತಜ್ಞತಾ ಸಭೆ ನಡೆಯಿತು. ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್, ಕ್ಷೇತ್ರದ ಆಡಳಿತ ಮೊಕ್ತೇಸರ ದಿನೇಶ್ ಅಂಚನ್, ಮೇಯರ್ ಜಯಾನಂದ ಅಂಚನ್, ಗರಡಿ ಸಂಭ್ರಮ ಸಮಿತಿಯ ಅಧ್ಯಕ್ಷ ಮೋಹನ್ ಉಜ್ಜೋಡಿ, ಮ್ಯಾನೇಜರ್ ಜೆ.ಕಿಶೋರ್, ಗರಡಿ ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, ಎ.ವಾಮನ, ಬಿ.ದಾಮೋದರ ನಿಸರ್ಗ, ದಿವರಾಜ್, ಜಗದೀಪ್ ಡಿ. ಸುವರ್ಣ, ಜೆ.ವಿಜಯ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹಾಗೂ ಕೋಶಾಧಿಕಾರಿ ಪದ್ಮರಾಜ್ ಮೊದಲಾದವರಿದ್ದರು.
Published on

ಮಂಗಳೂರು: ಕಂಕನಾಡಿ ಬಹ್ಮಬೈದರ್ಕಳ ಗರಡಿ ಕ್ಷೇತ್ರದ 150ನೇ ವರ್ಷದ ಅಂಗವಾಗಿ ಗರಡಿ ಸಂಭ್ರಮ ಆಚರಣೆ ದೈವಾನುಗ್ರಹದಿಂದ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ ಎಂದು ಕಂಕನಾಡಿ ಗರಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಹೇಳಿದರು.

ಕಂಕನಾಡಿ ಗರಡಿ ಕ್ಷೇತ್ರದ ಗರಡಿ ಸಂಭ್ರಮದಲ್ಲಿ ಶ್ರಮಿಸಿದ ಸಮಿತಿ ಹಾಗೂ ಸಾರ್ವಜನಿಕರಿಗೆ ಭಾನುವಾರ ನಡೆದ ಕೃತಜ್ಞತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರಡಿ ಸಂಭ್ರಮವನ್ನು ಪ್ರತಿಯೊಬ್ಬರೂ ಬ್ರಹ್ಮಬೈದರ್ಕಳರ ಸೇವೆ ಎಂಬಂತೆ ತೊಡಗಿಸಿಕೊಂಡು ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಎಲ್ಲಿಯೂ ಲೋಪವಾಗದಂತೆ ಸ್ವಯಂಸೇವಕರ ಸಮಿತಿ ಶ್ರಮವಹಿಸಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಾಮಗಳು ಮಾತ್ರವಲ್ಲದೆ ವಿವಿಧ ಕಡೆಯಿಂದ ತಂಡೋಪತಂಡವಾಗಿ ಭಕ್ತರು ಆಗಮಿಸಿ ಸೇವೆ ಸಲ್ಲಿಸಿದ್ದಾರೆ ಎಂದರು.

ಕ್ಷೇತ್ರದ ಆಡಳಿತ ಮೊಕ್ತೇಸರ ದಿನೇಶ್ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ, ಗರಡಿ ಸಂಭ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬಂದಿರುವುದು ಕ್ಷೇತ್ರದ ಶಕ್ತಿಗಳ ಪವಾಡ. ಆಡಳಿತ ಮಂಡಳಿ ಜತೆ ವಿವಿಧ ಸಮಿತಿಗಳು ಹಗಲಿರುಳೆನ್ನದೆ ನಿರಂತರ ಶ್ರಮಿಸಿದೆ ಎಂದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹಾಗೂ ಕೋಶಾಧಿಕಾರಿ ಪದ್ಮರಾಜ್ ಮಾತನಾಡಿದರು.

ಮೇಯರ್ ಜಯಾನಂದ ಅಂಚನ್, ಗರಡಿ ಸಂಭ್ರಮ ಸಮಿತಿ ಅಧ್ಯಕ್ಷ ಮೋಹನ್ ಉಜ್ಜೋಡಿ, ಮ್ಯಾನೇಜರ್ ಹಾಗೂ ಆಡಳಿತ ಮೊಕ್ತೇಸರ ಜೆ.ಕಿಶೋರ್, ಗರಡಿ ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, ಎ.ವಾಮನ, ಬಿ.ದಾಮೋದರ ನಿಸರ್ಗ, ದಿವರಾಜ್, ಜಗದೀಪ್ ಡಿ. ಸುವರ್ಣ, ಜೆ.ವಿಜಯ, ಚಪ್ಪರ ಕೊಂಬು ಕೃತಿ ಮುಖ್ಯಸ್ಥ ಮುದ್ದು ಮೂಡುಬೆಳ್ಳೆ ಹಾಗೂ ಜಯಾನಂದ್, ಕಾರ್ಪೊರೇಟರ್ ಸಂದೀಪ್ ಗರೋಡಿ, ಆರ್ಥಿಕ ಸಮಿತಿ ಮುಖ್ಯಸ್ಥ ಶರಣ್ ಪಂಪ್‌ವೆಲ್, ಬ್ರಿಜೇಶ್ ಚೌಟ, ಗೋಲ್ಡ್‌ಪಿಂಚ್ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಆರ್ಥಿಕ ಸಮಿತಿ ಸಂಚಾಲಕ ಚಿತ್ತರಂಜನ್ ಬೋಳಾರ್, ಶರಣ್ ಪಂಪ್‌ವೆಲ್, ಮಾಧ್ಯಮ ಸಮಿತಿಯ ವಿಜಯ್ ಕೋಟ್ಯಾನ್ ಪಡು, ಅಲಂಕಾರ ಸಮಿತಿ ಸಂಚಾಲಕ ಲಕ್ಷ್ಮೀನಾರಾಯಣ್, ಹೊರೆಕಾಣಿಕೆ ಸಮಿತಿ ಸಂಚಾಲಕ ಭರತ್‌ರಾಮ್, ವಿಜಯ ಕುಕ್ಯಾನ್, ರಾಮ್‌ಪ್ರಕಾಶ್ ಮತ್ತಿತರರು ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಧ್ಯಮ ಸಂಚಾಲಕ ಬ್ರಿಜೇಶ್ ಗರಡಿ ಮೊದಲಾದವರು ಉಪಸ್ಥಿತರಿದ್ದರು.

ಚಂದ್ರನಾಥ ಅತ್ತಾವರ ಸ್ವಾಗತಿಸಿದರು. ರಮಾನಂದ ವಂದಿಸಿದರು. ಕೃತಜ್ಞತಾ ಸಭೆಯ ಬಳಿಕ ಗರಡಿ ಸಂಭ್ರಮಕ್ಕೆ ಶ್ರಮಿಸಿದವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net