ಗಾಂಜಾ ಸೇದುತ್ತಿದ್ದ ಇಬ್ಬರು ಯುವಕರ ಬಂಧಿಸಿದ ಕಲಬುರಗಿ ಪೊಲೀಸರು

crime
Published on


 ಕಲಬುರಗಿ : ನಗರದ ಉಸ್ಮಾನಿಯಾ ಕಾಲನಿಯಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ರಾಣಪ್ಪ ಕೋರೆ ಮತ್ತು ಸೂರ್ಯಕಾಂತ ಮೇಲಿನಕೇರಿ ಬಂಧಿತರು. ಇಬ್ಬರು ಸೇರಿಕೊಂಡು ಕಾಲನಿಯ ಬ್ವಾಂಕೆಟ್ ಹಾಲ್ ಹಿಂಭಾಗದಲ್ಲಿ ಗಾಂಜಾ ಸೇವೆನೆ ಮಾಡುತ್ತಿದ್ದ ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಗಾಂಜಾ ಸೇವಿಸಿದ್ದು ಖಚಿತಪಟ್ಟಿದೆ. ಎಂಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net