

ಕಲಬುರಗಿ : ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಕಂಪೌAಡ್ ಬಳಿಯಲ್ಲಿ ಕುಳಿತುಕೊಂಡು ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಚಾಲಕನಾಗಿರುವ ಸಂಪತ್ತಕುಮಾರ ತಳವಾರ ಮತ್ತು ಸಂಗಮೇಶ ಗಣಜಲಖೇಡ ಎಂಬುವರೇ ಬಂಧಿತರು. ಇಬ್ಬರು ಸೇರಿಕೊಂಡು ಕಂಪೌAಡ್ ಮರೆಯಲ್ಲಿ ಕುಳಿತುಕೊಂಡು ಗಾಂಜಾ ಸೇದುತ್ತಿದ್ದರು. ಈ ವೇಳೆಯಲ್ಲಿ ಎಎಸ್‌ಐ ನಿಜಲಿಂಗಪ್ಪ ಹಾಗೂ ಸಿಬ್ಭಂದಿ ಕೂಡಿಕೊಂಡು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ,ಗಾAಜಾ ಸೇದಲು ಬಳಸಿದ ಚಿಲುಮೆ ಅದರಲ್ಲಿದ್ದ ವಸ್ತುವನ್ನು ಜಪ್ತಿ ಮಾಡಿಕೊಂಡಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.