ಕಾಲೇಜ್ ರಸ್ತೆಯಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನ

30 dnd 3
Published on

ದಾಂಡೇಲಿ: ಇಲ್ಲಿಯ ಅಂಬೇವಾಡಿ ವಿಟಿಯು ಕಾಲೇಜ್​ಗೆ ಹೋಗುವ ರಸ್ತೆಯ ಪಕ್ಕದ ಬಸ್ ತಂಗುದಾಣದ ಬಳಿ ಶನಿವಾರ ಬೆಳಗ್ಗೆ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಅಂಬೇವಾಡಿಯ ಮುಕ್ತುಂಮಸಾಬ್ ಗಡಾದ (25) ಎಂಬಾತನನ್ನು ಬಂಧಿಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೃತ್ತಿಯಲ್ಲಿ ಆಟೋ ಚಾಲಕನಾದ ಆರೋಪಿಯ ಬಳಿ ರೂ 60. 000 ರೂ. ಮೌಲ್ಯದ 2.080 ಕೆ.ಜಿ . ಹಸಿ ಗಾಂಜಾ ವಶ ಪಡೆಸಿಕೊಳ್ಳಲಾಗಿದೆ. ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಕಿರಣ ಪಾಟೀಲ ಹಾಗೂ ಎಎಸ್​ಐ ನೀಲಕಂಠ ಆಚಾರಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net