ಬೈಕಲ್ಲಿ ಸಾಗಿಸುತ್ತಿದ್ದ ಗಾಂಜಾ ವಶ

ganja
Published on

ಕಾಸರಗೋಡು: ಬೈಕಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪಡನ್ನ ಕೈಪಾಟಿ ನಿವಾಸಿ ರಾತಿಕ್ ಹಾಗೂ ಪಡನ್ನ ತೆಕ್ಕೇಪುರ ನಿವಾಸಿ ಮಹಮ್ಮದ್ ಬಂಧಿತರು. ಪಡನ್ನ ಬ್ಯಾಂಕ್ ಜಂಕ್ಷನ್ ಬಳಿ ಚಂದೇರ ಠಾಣೆ ಎಸ್.ಐ ಕೆ.ಪಿ.ಸತೀಶ್ ನೇತೃತ್ವದ ಪೊಲೀಸರ ತಂಡ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಆಗಮಿಸಿದ ಬೈಕ್ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಸಾಗಾಟಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net