

ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ 2023-2024ನೇ ಸಾಲಿನಲ್ಲಿ 1.09 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.17 ಪಾಲು ಮುನಾೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಸಹಕಾರಿ 4,193 ಸದಸ್ಯರನ್ನು ಹೊಂದಿದ್ದು, ಸಹಕಾರಿ ದುಡಿಯುವ ಬಂಡವಾಳ 87.77 ಕೋಟಿ ರೂ., 77.59 ಕೋಟಿ ರೂ. ಠೇವಣಿ ಹೊಂದಿದೆ. 27.01 ಕೋಟಿ. ರೂ.ಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ. ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ವೆಂಕಟೇಶ ಶೆಣೈ ಹೇಳಿದರು.
ಗಂಗೊಳ್ಳಿಯಲ್ಲಿ ಭಾನುವಾರ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ 104ನೇ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತ್ವರಿತ, ಉತ್ಕೃಷ್ಟ ದರ್ಜೆಯ ಗ್ರಾಹಕ ಸೇವೆಯನ್ನು ನೀಡಲು, ಸದಸ್ಯರಿಗೆ ನಗದು ರಹಿತ ವ್ಯವಹಾರ ನಡೆಸಲು ಸಹಕಾರಿ ಶ್ರಮಿಸುತ್ತಿದೆ. 2024-25ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಆಡಳಿತ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅವುಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸುವಲ್ಲಿ ಶ್ರಮಿಸುತ್ತಿದೆ. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸದಸ್ಯರು ಸಂಸ್ಥೆ ಮೇಲಿಟ್ಟಿರುವ ವಿಶ್ವಾಸವೇ ಸಹಕಾರಿಯ ಅಭಿವೃದ್ಧಿಗೆ ಕಾರಣ ಎಂದರು.
ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎನ್.ಮಾಧವ ಕಿಣಿ, ಎಸ್.ವೆಂಕಟರಮಣ ಆಚಾರ್ಯ, ಜಿ.ವೇದವ್ಯಾಸ ಆಚಾರ್ಯ, ನಾಗಪ್ರಸಾದ್ ಪೈ ಎಂ.ಜಿ., ಎಚ್.ಗಣೇಶ ಕಾಮತ್, ಮಹಾಬಲ ಪೂಜಾರಿ, ಕಿರಣ್ ಫಿಲಿಪ್ ಪಿಂಟೋ, ಜಿ.ವೆಂಕಟೇಶ ನಾಯಕ್, ಯು.ವಿಷ್ಣು ಪಡಿಯಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಉಪಸ್ಥಿತರಿದ್ದರು. ಇದೇ ಸಂದರ್ಭ ಸಹಕಾರಿಯಲ್ಲಿ 25 ವರ್ಷ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಗಣೇಶ ನಾಯಕ್ ಅವರನ್ನು ಗೌರವಿಸಲಾಯಿತು.
ಸಹಕಾರಿಯ ನಿರ್ದೇಶಕ ಕೆ.ಗೋಪಾಲಕೃಷ್ಣ ನಾಯಕ್ ಸ್ವಾಗತಿಸಿದರು. ನಿರ್ದೇಶಕಿ ಮಾಲಾ ಕೆ.ನಾಯಕ್‌ಸಾಮಾನ್ಯ ಸಭೆ ಸೂಚನಾ ಪತ್ರ ವಾಚಿಸಿದರು. ನಿರ್ದೇಶಕ ಬಿ.ರಾಘವೇಂದ್ರ ಪೈ ನಿರೂಪಿಸಿದರು. ನಿರ್ದೇಶಕ ಕೆ.ಪರಮೇಶ್ವರ ನಾಯಕ್ ವಂದಿಸಿದರು.