

ಗಂಗಾವತಿ: ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಜಿಲ್ಲಾಸ್ಪತ್ರೆಯ ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ.ಕುಮಾರಸ್ವಾಮಿ ಹೇಳಿದರು.
ನಗರದ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ಸರ್ಕಾರಿ ವಸತಿ ನಿಲಯಗಳ ಮೇಲ್ವಿಚಾರಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಡೆಂೆ ಮತ್ತು ಚಿಕೂನ್‌ಗುನ್ಯಾ ಕಾಯಿಲೆ ನಿಯಂತ್ರಣ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ‘ಚರಂಡಿ ಭರ್ತಿ’ ಸಾಂಕ್ರಾಮಿಕ ರೋಗ ಭೀತಿ
ಸಾಂಕ್ರಾಮಿಕ ರೋಗಗಳು ಹಾಸ್ಟೆಲ್ ವಾತಾವರಣದಿಂದ ವರದಿಯಾಗುತ್ತಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರೋಗಕ್ಕೆ ಕಾರಣವಾದ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರಿಕೆವಹಿಸಿ ಸಕಾಲಕ್ಕೆ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಮಾತನಾಡಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿದ್ದು, ಇಲಾಖೆ ಯೋಜನೆಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.
ತಾಲೂಕು ವೈದ್ಯಾಧಿಕಾರಿ ಗೌರಿಶಂಕರ ಚಿತ್ರಿಕಿ, ಆರೋಗ್ಯ ಇಲಾಖೆ ವಿವಿಧ ವಿಭಾಗದ ಮೇಲ್ವಿಚಾರಕರಾದ ದೇವೇಂದ್ರಗೌಡ, ಭೀಮೇಶ, ಬಸವಲಿಂಗ ಪ್ರಸಾದ, ರಮೇಶ, ಸುರೇಶ, ಗುರುಪ್ರಸಾದ, ರೇಣುಕಾ ಪಾಟೀಲ್, ಮಂಜುಳಾ, ಹಾಸ್ಟೆಲ್ ವಾರ್ಡ್‌ನಗಳಾದ ಮಲ್ಲಿಕಾರ್ಜುನ ಪೊ. ಪಾಟೀಲ್, ಗದ್ಯಪ್ಪ ಕುರಿ,ಲತಾ, ಬಿ.ಹುಸೇನ್, ಮಹ್ಮದ್ ಗೌಸ್, ಮಲ್ಲಯ್ಯ ಗೋಮರ್ಸಿ, ಮಲ್ಲಿಕಾರ್ಜುನ್ ಸುಂಕದ, ಬಸವರಾಜ್ ಬಡಿಗೇರ್, ನಾಗಲಕ್ಷ್ಮೀ, ಪಾರ್ವತಿ, ಶಾಂತಕುಮಾರಿ, ಲಕ್ಷ್ಮೀಬಾಯಿ ಗಣಾಚಾರಿ ಇತರರಿದ್ದರು.