ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯಲ್ಲಿ 28.79 ಲಕ್ಷ ರೂ. ಸಂಗ್ರಹ

Anjanadri Temple Hundi Counting
ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಹುಂಡಿ ಹಣ ಎಣಿಸುತ್ತಿರುವ ಕಂದಾಯ ಸಿಬ್ಬಂದಿ. ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಹುಂಡಿಯಲ್ಲಿ ದೊರೆತ ವಿದೇಶಿ ನಾಣ್ಯಗಳು.
Published on

ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಹುಂಡಿಯಲ್ಲಿ 28.79 ಲಕ್ಷ ರೂ. ಸಂಗ್ರಹವಾಗಿದ್ದು, 4 ವಿದೇಶಿ ನಾಣ್ಯಗಳಿವೆ.

ಮುಜರಾಯಿ ಇಲಾಖೆಗೊಳಪಡುವ ದೇವಾಲಯದ ಹುಂಡಿ ಹಣವನ್ನು ಭದ್ರತೆ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ಎಣಿಸಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆಯಿಂದ 55 ದಿನಗಳ ನಂತರ ಪೊಲೀಸ್, ಬ್ಯಾಂಕ್ ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗಿದ್ದು, 28,79,910 ರೂ. ಸಂಗ್ರಹವಾಗಿದೆ.

ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹುಂಡಿ ತೆರೆಯಲಾಗಿದ್ದು, ಸಂಗ್ರಹ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಲಾಗಿದೆ. ಬ್ರೆಜಿಲ್, ಸಿಂಗಾಪುರ, ನೇಪಾಳ, ದುಬೈ ದೇಶದ ನಾಲ್ಕು ನಾಣ್ಯಗಳಿವೆ. ಮುಂಜಾಗ್ರತೆ ಕ್ರಮಗಳೊಂದಿಗೆ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಕಳೆದ ಬಾರಿ ಹುಂಡಿ ತೆರೆದಾಗ 10.64ಲಕ್ಷ ರೂ.ಸಂಗ್ರಹವಾಗಿತ್ತು ಎಂದರು.

ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿ, ಶಿರಸ್ತೇದಾರರಾದ ಅನಂತ ಜೋಶಿ, ರವಿಕುಮಾರ ನಾಯಕವಾಡಿ, ಮಹೆಬೂಬ್ ಅಲಿ, ಕೃಷ್ಣವೇಣಿ, ಆರ್‌ಐಗಳಾದ ಮಂಜುನಾಥ ಹಿರೇಮಠ, ಮಹೇಶ್ ದಲಾಲ್, ಬಿ.ಶರಣಪ್ಪ, ಗುರುರಾಜ, ಶ್ರೀಕಂಠೇಶ, ಪಿಕೆಜಿಬಿ ಬ್ಯಾಂಕ್ ಪ್ರತಿನಿಧಿಗಳಾದ ರಾಜಶೇಖರ್, ಸುನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net