ದುರ್ಗಮ್ಮಹಳ್ಳದಲ್ಲಿ ನಾಪತ್ತೆಯಾದ ಬಾಲಕನನ್ನು ಪತ್ತೆ ಹಚ್ಚಿ

Untitled design(5)
ದುರ್ಗಮ್ಮಹಳ್ಳದಲ್ಲಿ ನಾಪತ್ತೆಯಾದ ಬಾಲಕ ಪತ್ತೆ ಹಚ್ಚುವುದರ ಜತೆಗೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಎಲುಒತ್ತಾಯಿಸಿ ಸಿಪಿಐ(ಎಂಎಲ್)ಲಿಬರೇಶನ್ ಕಾರ್ಯಕರ್ತರು ಗಂಗಾವತಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಡಿ.ವಿಜಯದೊರೈರಾಜು, ಪದಾಧಿಕಾರಿಗಳಾದ ಹನುಮಂತಪ್ಪ ಹುಲಿಹೈದರ್, ರೇಣುಕಮ್ಮ ಇತರರಿದ್ದರು.
Published on

ಗಂಗಾವತಿ: ದುರ್ಗಮ್ಮಹಳ್ಳದಲ್ಲಿ ನಾಪತ್ತೆಯಾದ ಬಾಲಕ ಪತ್ತೆ ಹಚ್ಚುವುದರ ಜತೆಗೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ಸಿಪಿಐ(ಎಂಎಲ್)ಲಿಬರೇಶನ್ ಕಾರ್ಯಕರ್ತರು ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಮಂಗಳವಾರ ಪ್ರತಿಭಟಿಸಿದರು.

ಅಂಗ ಸಂಘಟನೆಗಳ ಕಾರ್ಯಕರ್ತರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಡಿ.ವಿಜಯದೊರೈರಾಜು ಮಾತನಾಡಿ, ಮಹೆಬೂಬ್‌ನಗರದ ಬಾಲಕ ಮಹ್ಮದ್ ಅಜಾನ್ ನಾಪತ್ತೆಯಾಗಿ ನಾಲ್ಕು ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ವಿಲವಾಗಿದ್ದು, ಗಂಭೀರ ಪರಿಗಣಿಸುತ್ತಿಲ್ಲ. ಕುಟುಂಬಕ್ಕೆ ಸೂಕ್ತ ಪರಿಹಾರ ವಿತರಿಸುವುದರ ಜತೆಗೆ ದುರ್ಗಮ್ಮ ಹಳ್ಳಕ್ಕೆ ತಂತಿ ಬೇಲಿ ಹಾಕುವಂತೆ ಒತ್ತಾಯಿಸಿದರು.

ರಾಜ್ಯ ಕಾರ್ಯದರ್ಶಿ ಕ್ಲ್ಟಿನ್ ಡಿ ರೊಜಾರಿಯೋ, ಪದಾಧಿಕಾರಿಗಳಾದ ನಾಗರಾಜ ಪೂಜಾರಿ, ಸಣ್ಣ ಹನುಮಂತಪ್ಪ ಹುಲಿಹೈದರ್, ಬುರ‌್ಹಾನ್ನುದ್ದಿನ್, ಹುಲಿಗೆಮ್ಮ, ದ್ಯಾವಮ್ಮ, ರೇಣುಕಮ್ಮ ಇತರರಿದ್ದರು.

ಎಸ್‌ಡಿಪಿಐ: ಬಾಲಕ ಪತ್ತೆಗಾಗಿ ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದರು. ಪತ್ತೆಹಚ್ಚುವಲ್ಲಿ ವಿಲರಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು. ಕಾರ್ಯದರ್ಶಿ ಸಲೀಂ ಮನಿಯಾರ್, ಅಜೀಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net