

ಕಂಪ್ಲಿ: ತಾಯಿ, ಮಗುವಿನ ಸಾವಿಗೆ ಕಾರಣರಾದ ವೈದ್ಯರನ್ನು ಅಮಾನತು ಗೊಳಿಸಬೇಕು ಎಂದು ನಗರದ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮಂಗಳವಾರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಎಸ್.ಡಿ.ರಮೇಶ್‌ಗೆ ಮನವಿ ಸಲ್ಲಿಸಿದರು.
ವೇದಿಕೆ ಕಾರ್ಯಾಧ್ಯಕ್ಷ ಬಿ.ವಿರೂಪಾಕ್ಷಿ ಯಾದವ್ ಮಾತನಾಡಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಹಾಗೂ ಸಿಬ್ಬಂದಿ ಬೇಜವಾಬ್ದಾರಿಯಿಂದ ತಾಯಿ, ಮಗು ಪ್ರಾಣ ಕಳೆದುಕೊಂಡಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಬಿ.ಮಂಜುಳಾ, ಎಸ್.ಗೋಪಾಲ ಯಾದವ್, ಪೂಜಾರ ಜಗದೀಶ್, ಬಳ್ಳಾರಿ ಮಾಧವ, ಕೆ.ಶಬ್ಬೀರ್, ಜೆ.ಶಿವಕುಮಾರ್, ಎಂ.ಶಿವಪ್ರಕಾಶ್, ಸಂತೋಷ ಕುಮಾರ್, ಮುಕ್ಕಣ್ಣ, ಎನ್.ಗಂಗಮ್ಮ, ಈರಮ್ಮ, ಪಾರ್ವತಮ್ಮ, ಹುಲಿಗೆಮ್ಮ ಇತರರಿದ್ದರು.