ಹೊಸಕೋಟೆಯಲ್ಲಿ ಗಣೇಶೋತ್ಸವ

ಹೊಸಕೋಟೆಯಲ್ಲಿ ಗಣೇಶೋತ್ಸವ
Published on

ವಿರಾಜಪೇಟೆ: ಸಮೀಪದ ಬಿಳುಗುಂದ ಹೊಸಕೋಟೆಯಲ್ಲಿ ಶ್ರೀ ಕಾವೇರಿ ಸಂಘದ ವತಿಯಿಂದ ಎರಡನೇ ವರ್ಷದ ಗೌರಿ-ಗಣೇಶ ಉತ್ಸವವನ್ನು ಸ್ಥಳೀಯ ಸಮುದಾಯ ಭವನದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಸಲಾಯಿತು. ಬೆಳಗ್ಗೆ ಗಣಪತಿ ಹೋಮ, ಮೂರ್ತಿ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ಜರುಗಿತು.

ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ ಅಲಂಕೃತ ಮಂಟಪದಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಸ್ಥಳೀಯ ಕೆರೆಯಲ್ಲಿ ಮೂರ್ತಿಗಳ ವಿಸರ್ಜಿಸಲಾಯಿತು. ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net