ಕಂತೇನಹಳ್ಳಿ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ

19arsph1ep
Published on

ಅರಸೀಕೆರೆ: ನಗರದ ದೊಡ್ಡ ಗಣಪತಿ ಪೆಂಡಾಲಿನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಪ್ರಸನ್ನ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವ ಶನಿವಾರ ತಡರಾತ್ರಿ ಕಂತೇನಹಳ್ಳಿ ಕೆರೆಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.


ಸಾಯಿನಾಥ ರಸ್ತೆ, ಗರುಡನಗಿರಿ, ಲಕ್ಷ್ಮೀಪುರ ಬಡಾವಣೆ, ಎಪಿಎಂಸಿ ಆವರಣ ಸೇರಿದಂತೆ ಹಲವಡೆ ಮೆರವಣಿಗೆ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿ ಮೂಲಕ ಕಂತೇನಹಳ್ಳಿ ಗ್ರಾಮಕ್ಕೆ ಕರೆತಂದು ಪೂಜೆ, ಪುನಸ್ಕಾರಗಳನ್ನು ನೆರವೇರಿಸಿ ಕ್ರೇನ್ ಬಳಸಿ ತೆರೆದ ಆಳದ ಗುಂಡಿಯಲ್ಲಿ ವಿಸರ್ಜನೆ ಮಾಡಲಾಯಿತು. ಡಿ.ಜೆ.ಸದ್ದಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಹಲವರು ಹೆಜ್ಜೆ ಹಾಕಿದರು. ಮುದ್ದುಗುಂಡು ಪ್ರದರ್ಶನ ಎಲ್ಲರ ಗಮನಸೆಳೆಯಿತು. ಇದರೊಂದಿಗೆ 82 ದಿನಗಳ ಗಣೇಶೋತ್ಸವಕ್ಕೆ ತೆರೆ ಬಿದ್ದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net