

ಮಸ್ಕಿ: ದೇಶ ಸ್ವಾತಂತ್ರ್ಯವಾಗಲು ಜನರಲ್ಲಿ ಒಗ್ಗಟ್ಟು ಮೂಡಿಸುವುದಕ್ಕಾಗಿ ಸಾರ್ವಜನಿಕವಾಗಿ ಗಣೇಶ ಕೂಡಿಸುವ ಹಬ್ಬ ಆಚರಣೆ ತರಲಾಯಿತು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಬುಧವಾರ ಆಯೋಜಸಿದ್ದ ಹಿಂದು ಸಾಮರಸ್ಯ ವೇದಿಕೆಯ ಗಣಪತಿ ಪ್ರತಿಷ್ಠಾಪನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಳೆದ ವರ್ಷದಿಂದ ಹಿಂದು ಸಾಮರಸ್ಯ ವೇದಿಕೆಯಿಂದ 5ದಿನ ಗಣೇಶ ಉತ್ಸವ ಆಚರಣೆ ಮಾಡುವ ಮೂಲಕ ಹೊಸ ಸಂಪ್ರದಾಯ ಹಾಕಿದೆ. ಈ ವರ್ಷ 5 ದಿನ ಪ್ರತಿದಿನ ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಜನರಲ್ಲಿ ಜ್ಞಾನದ ಜಾಗೃತಿ ಮೂಡಿಸಲಿ. ಗಣೇಶ ಹಬ್ಬ ಆಚರಣೆಯಿಂದ ಸಮಾಜದಲ್ಲಿ ಸೌಹಾರ್ದತೆ ವೃದ್ಧಿಸಲಿದೆ
ಇದನ್ನೂ ಓದಿ: ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಕ್ರಮ
ಗಣೇಶ ವಿಸರ್ಜನೆಯ ವೇಳೆ ಮಹಿಳೆಯರು ಭಾಗವಹಿಸುತ್ತಿದ್ದು ಶಾಂತಿ ಸುವ್ಯವಸ್ಥೆಯೊಂದಿಗೆ ವಿಸರ್ಜನೆ ನಡೆಯಲು ಪೊಲೀಸರೊಂದಿಗೆ ಸಹಕರಿಸುವಂತೆ ಪ್ರತಾಪಗೌಡ ಪಾಟೀಲ ಮನವಿ ಮಾಡಿದರು.
ಪ್ರಮುಖರಾದ ಮಲ್ಲೇಶಪ್ಪ ಬ್ಯಾಳಿ, ಸುಕಮುನಿಯಪ್ಪ ನಾಯಕ್, ಶಿವಪ್ರಸಾದ ಕ್ಯಾತ್ನಟ್ಟಿ, ರಾಘವೇಂದ್ರ ಆಚಾರ್, ಲಕ್ಷ್ಮೀನಾರಯಣ ಶೆಟ್ಟಿ, ಸುರೇಶ ಹರಸುರು, ವಸಂತ ಬಾವಿ, ರಾಜೇಶ ಪಾಟೀಲ, ನಾಗರಾಜ ಯಂಬಲದ, ಶರಣಯ್ಯ ಗುಡದೂರು, ವೆಂಕಟೇಶ ಗುಡಸಲಿ, ಅಮರೇಶ ಬ್ಯಾಳಿ, ಭರತರಾಜ ದೇಶಮುಖ ಇತರರಿದ್ದರು.
31-ಎಂಎಸ್‌ಕೆ-3