

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರ ಸೇರಿದಂತೆ ಜಿಲ್ಲೆಯ ಎಲ್ಲಡೆ ಗಣೇಶ ಚೌತಿಯಂದು ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ವಿಘ್ನನಿವಾರಕ ಮೂರ್ತಿಗಳ ವಿಸರ್ಜನೆ ಸಡಗರ, ಸಂಭ್ರಮದೊAದಿಗೆ ಜರುಗಿತು. ಐದನೇ ದಿನವಾದ ಬುಧವಾರ ಸುಮಾರು ಸಾವಿರಕ್ಕೂ ಹೆಚ್ಚು ಗಣೇಶ ವಿಗ್ರಹಗಳ ವಿಸರ್ಜನೆ ಮಾಡಲಾಯಿತು.
ಇಲ್ಲಿನ ಅಪ್ಪನ ಕೆರೆಯಲ್ಲಿರುವ ಹೊಂಡದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ನಲ್ಲಿ ಶಿಸ್ತುಬದ್ಧವಾಗಿ ಪೂಜೆ ಇನ್ನಿತರ ಸಂಪ್ರದಾಯಿಕ ಕಾರ್ಯಗಳನ್ನು ನೆರವೇರಿಸಿದ ಬಳಿಕ ಪಾಲಿಕೆ ಸಿಬ್ಬಂದಿ ಕ್ರೇನ್‌ನಲ್ಲಿ ವಿಘ್ನೇಶ್ವರನ ವಿಗ್ರಹ ತೆಗೆದುಕೊಂಡು ಹೋಗಿ ವಿಸರ್ಜಿಸುವ ಕಾರ್ಯ ಮಾಡಿದರು.
ಗಣೇಶ ವಿಸರ್ಜನೆ ಮೆರವಣಿಗೆ ಎಲ್ಲಡೆ ಭರ್ಜರಿಯಾಗಿ ನಡೆದಿತ್ತು. ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆಗಳು ಹೊರಟಿದ್ದರಿಂದ ಒಂದು ಕಡೆಯ ರಸ್ತೆಯಲ್ಲಿ ವಾಹನಗಳನ್ನು ಸಂಚರಿಸುವAತೆ ಮಾಡುವ ಮೂಲಕ ಪೊಲೀಸರು ಮೆರವಣಿಗೆ ತೊಂದರೆ ಆಗದಂತೆ ನೋಡಿಕೊಂಡರು. ವಿನಾಯಕ ಮಂಡಳಿಯವರು, ಯುವಕರು ಮೆರವಣಿಗೆಯಲ್ಲಿ ಡಿಜೆ ಹಾಕಿ, ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ೩೬೩ ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ವಿಜೃಂಭಣೆ ಮೆರವಣಿಗೆ ಮೂಲಕ ವಿದಾಯ ಹೇಳಲಾಯಿತು. ಸಂಜೆ ಶುರುವಾದ ವಿಸರ್ಜನಾ ಮೆರವಣಿಗೆ ಗುರುವಾರ ನಸುಕಿನವರೆಗೂ ನಡೆಯಿತು.
ಗಜಾನನ ಮಹಾರಾಜ ಕೀ ಜೈ' ಎಂಬಿತ್ಯಾದಿ ಘೋಷಣೆಗಳು ಎಲ್ಲಡೆ ಮೊಳಗುತ್ತಿದ್ದವು.ಭಗವಾ ಧ್ವಜಗಳು ರಾರಾಜಿಸಿದವು. ದೇಶಭಕ್ತಿ ಗೀತೆಗಳು ಝೇಂಕರಿಸಿದವು. ವಿವಿಧ ಬಡಾವಣೆ ಗಣೇಶನನ್ನು ಅಲಂಕೃತ ವಾಹನಗಳಲ್ಲಿ ಬಾಜಾ-ಭಜಂತ್ರಿಯೊAದಿಗೆ ಮೆರವಣಿಗೆ ಮೂಲಕ ನಗರದ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನ ಬಳಿಯ ಅಪ್ಪನ ಕೆರೆಯವರೆಗೂ ಆಗಮಿಸಿದರು. ಅಲ್ಲಿರುವ ಹೊಂಡದಲ್ಲಿ ವಿಗ್ರಹಗಳ ವಿಸರ್ಜನೆ ಮಾಡಿದರು.
ಮುಂಜಾಗ್ರತಾ ಕ್ರಮವಾಗಿ ಎಲ್ಲಡೆ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ ಇತರರು ಗಣೇಶ ವಿಸರ್ಜನೆ ಹೊಂಡದ ಬಳಿಯಿದ್ದು ಆರಂಭದ ವಿಗ್ರಹಗಳನ್ನು ಬರ ಮಾಡಿಕೊಂಡರು. ಎಸಿಪಿಗಳಾದ ಭೂತೆಗೌಡ, ರಾಜಣ್ಣ,ಸಂತೋಷ ಬನ್ನಟ್ಟಿ, ಸುಧಾ ಆದಿ, ಮಡ್ಯಾರಪ್ಪ ಇತರರು ಎಲ್ಲಡೆ ನಿಗಾ ಇರಿಸಿದರು. ಜಿಲ್ಲೆಯಲ್ಲಿ ಶಾಂತಿಯುತವಾಗಿ ಗಣೇಶ ವಿರ್ಸಜನೆ ಮೆರವಣಿಗೆ ನಡೆಸಿಕೊಂಡು ಹೋಗುವ ಪ್ರಕ್ರಿಯೆ ಮೇಲೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ನಿಗಾ ಇರಿಸಿದ್ದರು. ಕೆಲವು ಕಡೆಗಳಲ್ಲಿ ಅವರು ಖುದ್ದು ಭೇಟಿ ನೀಡಿದರು.