ಆ.27ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಾರಾಟಗಾರರು ಪೇಟೆ ಬೀದಿಗಳಲ್ಲಿ ಗಣೇಶ ಮೂರ್ತಿ ಜೋಡಣೆ ಮಾಡಿದ್ದಾರೆ. ಈ ಬಾರಿ ಗ್ರಾಮೀಣ ಪ್ರದೇಶದ ಕೆರೆ ಕಟ್ಟೆಗಳಲ್ಲಿ ನೀರು ತುಂಬಿದ್ದು, ಹಬ್ಬದ ಸಡಗರ ಹೆಚ್ಚಿಸಿದೆ. ಗಣೇಶ ಪ್ರತಿಷ್ಠಾಪನೆಗೆ ಚಪ್ಪರ, ಅಲಂಕಾರ, ಮೆರವಣಿಗೆಗೆ ಬೇಕಾದ ಜಾನಪದ ಕಲಾ ತಂಡಗಳ ಮುಂಗಡ ಕಾಯ್ದಿರಿಸುವಿಕೆ, ವಿದ್ಯುತ್ ದೀಪಾಲಂಕಾರಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಹಾಗೆಯೇ ಯುವಕರು ಗಣಪತಿ ಮೂರ್ತಿ ಖರೀದಿಸಲು ಮುಂದಾಗಿದ್ದು, ಬಣ್ಣ ಬಣ್ಣದ ವಿಶೇಷತೆಯುಳ್ಳ ಗಣಪತಿಮೂರ್ತಿ ಕೊಳ್ಳಲು ಮಾರುಕಟ್ಟೆಗೆ ಮುಖ ಮಾಡಿದ್ದಾರೆ.