ಕಾಳಾವರದಲ್ಲಿ 15ನೇ ವರ್ಷದ ಗಣೇಶೋತ್ಸವ

kalavara
ಕಾಳಾವರ ಗಣೇಶೋತ್ಸವದಲ್ಲಿ ಹಲವರನ್ನು ಸನ್ಮಾನಿಸಲಾಯಿತು. ಮಂಜುನಾಥ ಶೆಟ್ಟಿಗಾರ, ರಾಮಚಂದ್ರ ನಾವಡ, ಲಲಿತಾ ಕುಕ್ಕೇರಿ ಮೊದಲಾದವರಿದ್ದರು
Published on

ಜನ್ನಾಡಿ; ಕಕ್ಕೇರಿ ಕಾಳಾವರದ ಶ್ರೀ ಚಿಕ್ಕಮ್ಮ ದೇವಿ ಯುವಕ ಮಂಡಲದ 15ನೇ ಗಣೇಶೋತ್ಸವ ಇತ್ತೀಚೆಗೆ ನಡೆಯಿತು. ಕಾಳಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಶೆಟ್ಟಿಗಾರ, ಮಾಜಿ ಉಪಾಧ್ಯಕ್ಷ ರಾಮಚಂದ್ರ ನಾವಡ, ಮಾಜಿ ಅಧ್ಯಕ್ಷೆ ಲಲಿತಾ ಕುಕ್ಕೇರಿ, ನಿವೃತ್ತ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ದಯಾನಂದ ಹೆಗ್ಡೆ ಶುಭಹಾರೈಸಿದರು. ಅರ್ಚಕ ಸೂರ್ಯನಾರಾಯಣ ಹೇರ್ಳೆ, ಕಾಳಾವರ ಗ್ರಾಪಂ ಆಶಾ ಕಾರ್ಯಕರ್ತೆಯರಾದ ಪ್ರೇಮಾ, ಸುಜಾತಾ, ರೇಣುಕಾ ಜೋಗಿ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ಪ್ರಶಾಂತ್ ಅವರನ್ನು ಗೌರವಿಸಲಾಯಿತು. ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕ ಉದಯ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವ ಕುಲಾಲ್ ಸ್ವಾಗತಿಸಿದರು. ವ್ನಿೇಶ್ ವಂದಿಸಿದರು. ನಿತ್ಯಾನಂದ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಮಕ್ಕಳು ಹಾಗೂ ಯುವಕ ಮಂಡಲದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net