ನಾಲ್ಕೂರು ಗಣೇಶೋತ್ಸವದಲ್ಲಿ ಪ್ರತಿಭಾ ಪುರಸ್ಕಾರ

puraskar
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಾಲ್ಕೂರು ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ‌್ಯಾಂಕ್ ಪಡೆದ ಅಮೃತಾ ಶೆಣೈ, ಗುಡಿ ಕೈಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡ ಆನಂದ ಕುಲಾಲ ಮಾರಾಳಿ ಮೇಲಂಟ್ರಬೆಟ್ಟು, ಗುಲಾಬಿ ತೇಜ ಹಾಂಡ್ತಿ ಕಜ್ಕೆ ಅರಮನೆಜೆಡ್ಡು, ಮೆಸ್ಕಾಂ ಕೆಇಬಿ ನಾಲ್ಕೂರು ಸೈಪ್ ಅಲಿ ಅವರನ್ನು ಸನ್ಮಾನಿಸಲಾಯಿತು
Published on

ಕೊಕ್ಕರ್ಣೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಾಲ್ಕೂರು 28ನೇ ವರ್ಷದ ಶ್ರೀ ಗಣೇಶೋತ್ಸವ ಸಭಾ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 8ನೇ ರ‌್ಯಾಂಕ್ ಪಡೆದ ಅಮೃತಾ ಶೆಣೈ, ಗುಡಿ ಕೈಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡ ಆನಂದ ಕುಲಾಲ ಮಾರಾಳಿ ಮೇಲಂಟ್ರಬೆಟ್ಟು, ಗುಲಾಬಿ ತೇಜ ಹಾಂಡ್ತಿ ಕಜ್ಕೆ ಅರಮನೆಜೆಡ್ಡು, ಮೆಸ್ಕಾಂ ಕೆಇಬಿ ನಾಲ್ಕೂರು ಸೈಪ್ ಅಲಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಗಣೇಶೋತ್ಸವ ಸಮಿತಿ ನಾಲ್ಕೂರು ಅಧ್ಯಕ್ಷ ಶರತ ಶೆಟ್ಟಿ ಮುದ್ದೂರು, ಉಡುಪಿ ಜಿಪಂ ನಿಕಟಪೂರ್ವ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ನಾಲ್ಕೂರು ಗ್ರಾಪಂ ಅಧ್ಯಕ್ಷೆ ಪ್ರತಿಮಾ ರವಿಚಂದ್ರ ಆಚಾರ್, ಮಾಜಿ ಉಪಾಧ್ಯಕ್ಷ ಪ್ರಭಾಕರ ಎ., ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ನೇತಾಜಿ ಸೇವಾ ವೇದಿಕೆ ನಾಲ್ಕೂರು ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ, ಅಧ್ಯಕ್ಷ ನಾಗೇಂದ್ರ ಆಚಾರ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ವೈದ್ಯ ಮುದ್ದೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರರಾದ ಸಂತೋಷ ಹೆಗ್ಡೆ ಮಾರಾಳಿ, ಸುಧಾಕರ ಶೆಟ್ಟಿ, ರೋಟರಿ ಕ್ಲಬ್ ಕೊಕ್ಕರ್ಣೆ ಅಧ್ಯಕ್ಷ ಕಾಶೀನಾಥ ಶೆಣೈ ಕಜ್ಕೆ, ಶ್ರೀನಿವಾಸ ಮಂಜ ಒಳ್ಳೆಹೊಂಡ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿವರ

ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಮಂಗಳಾರತಿ, ಗಣಪತಿ ಹೋಮ, ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆ, ಅನ್ನಸಂತರ್ಪಣೆ, ಎಸ್ಸೆಸ್ಸೆಲ್ಸಿ ಮತ್ತು ಪದವಿ ಪೂರ್ವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶ್ರೀರಾಮ ಭಜನಾ ಮಂಡಳಿ ನಾಲ್ಕೂರು ಇವರಿಂದ ಭಜನಾ ಕಾರ್ಯಕ್ರಮ, ವೈವಿದ್ಯಮಯ ಮನೋರಂಜನಾ ಕಾರ್ಯಕ್ರಮ, ಸಾರ್ವಜನಿಕರು ಮತ್ತು ಅತಿಥಿ ಕಲಾವಿದರಿಂದ ಭೀಷ್ಮ ವಿಜಯ ಯಕ್ಷಗಾನ, ಪುರಮೆರವಣಿಗೆ, ವಿಸರ್ಜನೆ ಮುಂತಾದ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net