ಹಿರೀಸಾವೆ ಸಹಕಾರ ಸಂಘಕ್ಕೆ ಗಣೇಶ್ ಅಧ್ಯಕ್ಷ

25 HRS 01
Published on

ಹಿರೀಸಾವೆ: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗಣೇಶ್ ಅವಿರೋಧ ಆಯ್ಕೆಯಾದರು.


ಅಧ್ಯಕ್ಷ ಸೋಮಶೇಖರ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಗಣೇಶ್ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯೂ ಆದ ಸಹಕಾರ ಇಲಾಖೆ ಸಿಬ್ಬಂದಿ ವಾಸಿಂ ಅವಿರೋಧ ಆಯ್ಕೆ ಘೋಷಿಸಿದರು. ಸಂಘದ ಮೇಲ್ವಿಚಾರಕ ಮಧು, ಉಪಾಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಮಾಜಿ ಅಧ್ಯಕ್ಷ ಮಹೇಶ್, ಮುಖಂಡರಾದ ರವಿಕುಮಾರ್, ಶ್ರೀಧರ್, ಭರತಶೆಟ್ಟಿ, ಮಂಜುನಾಥ್, ಹೋಬಳಿಯ ವಿಶ್ವಕರ್ಮ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net