ಕಲಬುರಗಿಯಲ್ಲಿ ಚೌತಿ ಸಂಭ್ರಮ ಬಲು ಜೋರು : ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಎಲ್ಲಡೆ ಭರ್ಜರಿ ತಯಾರಿ

IMG-20230918-WA0033
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ತೊಗರಿ ನಾಡು ಕಲಬುರಗಿಯಲ್ಲಿ ಗಣೇಶ  ಚೌತಿಯ ಸಂಭ್ರಮ ಜೋರಾಗಿದೆ. ನಗರ ಸೇರಿದಂತೆ ಜಿಲ್ಲೆಯ ಎಲ್ಲಢ ವಿಘ್ನ ನಿವಾರಕ ಗಣಪತಿಯ  ಪ್ರತಿಷ್ಠಾಪನೆ ಮಾಡಲು ಎಲ್ಲಡೆ ಭರದ ತಯಾರಿ ನಡೆದಿದೆ. ಕೆಲ ಹೊತ್ತಿನಲ್ಲಿ ಗಣೇಶ ಪ್ರತಿಷ್ಠಾಪನೆ ಆರಂಭಗೊಳ್ಳಲಿದೆ.

ಈ ಸಲ ಎರಡು ಗಣೇಶ  ಚತುರ್ಥಿ ಮಿತಿ ಬಂದಿದೆ. ಹೀಗಾಗಿ ಕೆಲವರು ಇಂದು ಮತ್ತೇ ಇನ್ನೂ ಕೆಲವರು ನಾಳೆ ಅಂದರೆ‌ ಮಂಗಳವಾರ ಗಣಪತಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ‌. ಹೀಗಾಗಿ ಕೆಲವರು ಗೊಂದಲ‌ ಮೂಡಿದೆ.

ನಗರದ ಸೂಪರ್ ಮಾರ್ಕೇಟ್, ಅಪ್ಪನ ಗುಡಿ ಮುಂಭಾಗ, ಶಹಾಬಜಾರ ನಾಕಾ, ನೆಹರು ಗಂಜ್, ಕೋಟೆ ಬಳಿ ಹೀಗೆ ಹಲವು ಕಡೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಲು ಭರ್ಜರಿ ತಯಾರಿ ನಡೆದಿವೆ. ಮಂಟಪ ಹಾಕುವುದು, ಟೆಂಟ್ ಹಾಕುವುದು, ವಿದ್ಯುತ್ ದೀಪ ಹಾಕುವುದು ಮೊದಲಾದ ಕೆಲಸ  ಜೋರಾಗಿ  ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net