ಚೌತಿಗೆ ಶುಭಾಶಯ ಕೋರಿದ ಫ್ಲೆಕ್ಸ್ ಛಿದ್ರ; ಬಿಜೆಪಿ ಯುವ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿಯ ಕೃತ್ಯ

Flex Damage
Published on

ಹಾಸನ: ರಾಜ್ಯದಲ್ಲಿ ಫ್ಲೆಕ್ಸ್ ಸಂಘರ್ಷ ಮುಗಿಯುವ ಹಾಗೆ ಕಾಣುತ್ತಿಲ್ಲ. ಸಾರ್ವಕರ್ ಫೋಟೋದಿಂದ ಆರಂಭಗೊಂಡ ಫ್ಲೆಕ್ಸ್ ಗಲಾಟೆ ಇನ್ನೂ ಮುಂದುವರಿದಿದ್ದು, ಹಾಸನದಲ್ಲೂ ಫ್ಲೆಕ್ಸ್​ವೊಂದನ್ನು ಛಿದ್ರಗೊಳಿಸಲಾಗಿದೆ. ಇದಕ್ಕೂ ರಾಜಕೀಯ ಲೇಪ ಇರುವ ಲಕ್ಷಣಗಳು ಗೋಚರಿಸಿವೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಗಣೇಶ ಚತುರ್ಥಿಗೆ ಶುಭಾಶಯ ಕೋರಿ ರಸ್ತೆಯ ಬದಿಯಲ್ಲಿ ಫ್ಲೆಕ್ಸ್ ಅಳವಡಿಸಿದ್ದರು. ಅದರಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫೋಟೋಗಳೂ ಇದ್ದವು. ಆದರೆ ಅದನ್ನು ಬಳಿಕ ಛಿದ್ರಗೊಳಿಸಲಾಗಿದೆ.

ವ್ಯಕ್ತಿಯೊಬ್ಬ ಫ್ಲೆಕ್ಸ್​ಗೆ ದೊಡ್ಡ ಬಡಿಗೆಯಿಂದ ಹೊಡೆದು ಹರಿದು ಹಾಕಿದ್ದು, ಸಂಪೂರ್ಣವಾಗಿ ಹಾಳುಗೆಡವಲಾಗಿದೆ. ಇದರ ವಿಡಿಯೋ ಕೂಡ ವೈರಲ್ ಆಗಿದ್ದು, ಕೆಲವೆಡೆ ಆಕ್ಷೇಪವೂ ವ್ಯಕ್ತವಾಗಿದೆ. ಫ್ಲೆಕ್ಸ್ ಛಿದ್ರಗೊಳಿಸಿದ ವ್ಯಕ್ತಿ ಸಕಲೇಶಪುರ ಬಿಜೆಪಿ ಯುವ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಮಿಥುನ್​ ಎನ್ನಲಾಗಿದೆ. ಆದರೆ ಫ್ಲೆಕ್ಸ್​ಗೆ ಹಾನಿ ಮಾಡಲು ಏನು ಕಾರಣ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net