

ಹುಬ್ಬಳ್ಳಿ: ದುಬೈಯಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ಇಂದು ಸಂಜೆ ನಡೆಯಲಿರುವ ಇಂಡೋ್-ಪಾಕ್ ಟಿ-20 ಕ್ರಿಕೆಟ್ ಮ್ಯಾಚ್ಗೆ ಈಗಾಗಲೇ ದೇಶಾದ್ಯಂತ ಕೌತುಕ ಕೆರಳಿದ್ದು, ಭಾರತ ಗೆಲ್ಲಲಿ ಎಂಬ ಕುರಿತ ಭಾವನೆ ಎಲ್ಲೆಡೆ ವ್ಯಕ್ತವಾಗಲಾರಂಭಿಸಿದೆ. ಅದರಲ್ಲೂ ಕೆಲವೆಡೆ ಪೂಜೆ ಪುರಸ್ಕಾರ ನಡೆಸಿ ಕೋರಿಕೊಳ್ಳುತ್ತಿರುವುದು ಕೂಡ ನಡೆದಿದೆ.
ಇದೇ ಸಲುವಾಗಿ ಹುಬ್ಬಳ್ಳಿಯ ದರ್ಗಾವೊಂದರಲ್ಲಿ ಪಾಕ್ ವಿರುದ್ಧ ವಿಶೇಷ ಪ್ರಾರ್ಥನೆ ನಡೆದಿದೆ. ಹಳೇ ಹುಬ್ಬಳ್ಳಿಯ ಫತೆಷಾ ವಲಿ ದರ್ಗಾದಲ್ಲಿ ಕ್ರಿಕೆಟ್ ಅಭಿಮಾನಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ಭಾರತ ಗೆಲುವು ಸಾಧಿಸಲಿ ಎಂದು ಕೋರಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಗೆಲುವಿಗಾಗಿ ಫತೇಷಾ ಬಾಬಾಗೆ ಪೂಜೆ ಸಲ್ಲಿಸಿದ ಕ್ರಿಕೆಟ್ ಅಭಿಮಾನಿಗಳು, ರಾಷ್ಟ್ರಧ್ವಜವನ್ನು ಹಿಡಿದು ಪ್ರಾರ್ಥನೆಯನ್ನು ಸಲ್ಲಿಸಿದರು. ಭಾರತ ತಂಡ ಗೆಲ್ಲಲಿ ಎಂದು ಕೋರಿಕೊಂಡರು. ಟಿಪ್ಪು ಸುಲ್ತಾನ್ ಈ ದರ್ಗಾಕ್ಕೆ ಪೂಜೆ ಸಲ್ಲಿಸಿ ಹೋಗಿ ಯುದ್ಧ ಗೆದ್ದಿದ್ದ ಎಂದೂ ಅವರು ಹೇಳಿಕೊಂಡಿದ್ದಾರೆ.