

ಕೋಟ: ಅಹಿಂಸೆ ಮೂಲಕವೇ ಅವಿರತ ಹೋರಾಟ ನಡೆಸಿ ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿಸುವ ಮೂಲಕ ಸತ್ಯ, ಶಾಂತಿ, ಅಹಿಂಸೆಯೇ ಯಶಸ್ಸಿನ ಮೂಲಮಂತ್ರವೆಂದು ಜಗತ್ತಿಗೆ ತೋರಿಸಿಕೊಟ್ಟಿರುವ ಮಹಾತ್ಮ ಗಾಂಧಿ ಮಹಾನ್ ಅಹಿಂಸಾ ಪ್ರತಿಪಾದಕ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ.ಕುಂದರ್ ಹೇಳಿದರು.
ಗುರುವಾರ ಕೋಟ ಬ್ಲಾಕ್ ಕಾಂಗ್ರೆಸ್ನ ಇಂದಿರಾ ಭವನದಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಸಾಲಿಗ್ರಾಮ ಪಪಂ ವಿಪಕ್ಷ ನಾಯಕರು ಹಾಗೂ ಸದಸ್ಯರಾದ ಶ್ರೀನಿವಾಸ್ ಅಮೀನ್, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಶೇಖರ್ ಪಿ.ಮರಕಾಲ, ಸಾಲಿಗ್ರಾಮ ಪಪಂ ಮಾಜಿ ಸದಸ್ಯರಾದ ಅಚ್ಚುತ್ ಪೂಜಾರಿ, ಮಹಾಬಲ ಮಡಿವಾಳ, ಪಾಂಡೇಶ್ವರ ಗ್ರಾಪಂ ಉಪಾಧ್ಯಕ್ಷ ವೈ.ಬಿ.ರಾಘವೇಂದ್ರ, ಕುಂದಾಪುರ ವಿಧಾನಸಭಾ ಕ್ಷೇತ್ರದ ಅಕ್ರಮ- ಸಕ್ರಮ ಸದಸ್ಯರಾದ ರಾಜೇಶ್ ನೆಲ್ಲಿಬೆಟ್ಟು, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರಮೇಶ್ ಮೆಂಡನ್, ಯಾಶಿನ್ ಪಡುಕೆರೆ, ಸಚಿನ್ ಶೆಟ್ಟಿ ವಡ್ಡರ್ಸೆ, ನಾಗೇಶ್ ಪೂಜಾರಿ ಪಡುಕೆರೆ, ಸುರೇಶ್ ನೆಲ್ಲಿಬೆಟ್ಟು, ಗಿರೀಶ್ ತೋಡ್ಕಟ್ಟು, ರಮೇಶ್, ಮಂಜುನಾಥ್ ಪೂಜಾರಿ ಗುಂಡ್ಮಿ, ಹಾರುನ್ ಸಾಹೇಬ್ ಗುಂಡ್ಮಿ, ರಾಜು ಪೂಜಾರಿ ಉಪಸ್ಥಿತರಿದ್ದರು. ಕೋಟ ವ್ಯವಸಾಯಕ ಬ್ಯಾಂಕ್ ನಿರ್ದೇಶಕರಾದ ರವೀಂದ್ರ ಕಾಮತ್ ಗುಂಡ್ಮಿ ಸ್ವಾಗತಿಸಿ, ವಂದಿಸಿದರು.