ಪಡುಬಿದ್ರಿಯಲ್ಲಿ ಗಾಂಧಿ ಭಾರತ ಸಮಾವೇಶ

pdb (6)
Published on

ಪಡುಬಿದ್ರಿ: ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭಾರತದ ಜನ ಸಾವಾನ್ಯರ ಸ್ವಾಭಿವಾನದ ಬದುಕಿನ ಹಕ್ಕಿಗಾಗಿ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ದೂರದೃಷ್ಟಿಯೊಂದಿಗೆ ಕಾರ್ಯಕ್ರಮ ರೂಪಿಸಿರುವುದು ಕಾಂಗ್ರೆಸ್ ಸರ್ಕಾರ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುವಾರ್ ಸೊರಕೆ ಹೇಳಿದರು.

ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ವತಿಯಿಂದ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಆತಿಥ್ಯದಲ್ಲಿ ಪಡುಬಿದ್ರಿಯಲ್ಲಿ ಭಾನುವಾರ ಆಯೋಜಿಸಿದ್ದ ಜೈ ಬಾಪು, ಜೈ ಬೀಮ್, ಜೈ ಸಂವಿಧಾನ ಗಾಂಧಿ ಭಾರತ ಬೃಹತ್ ಸವಾವೇಶ ಉದ್ಘಾಟಸಿ ವಾತನಾಡಿದರು.

ಕೆಪಿಪಿಸಿ ವಕ್ತಾರ ಸುಧೀರ್ ಮರೋಳಿ ವಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ ಮತ್ತು ಸಂಯೋಜಕ ನವೀನಚಂದ್ರ ಜೆ.ಶೆಟ್ಟಿ ವಾತನಾಡಿದರು.

ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ಅಧ್ಯಕ್ಷ ವೈ.ಸುಕುವಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನವೀನ್‌ಚಂದ್ರ ಸುವರ್ಣ, ಕಾಪು ದಿವಾಕರ್ ಶೆಟ್ಟಿ, ಗೀತಾ ವಾಗ್ಲೆ, ಅನಿತಾ ಡಿಸೋಜ ಬೆಳ್ಮಣ್, ಕರುಣಾಕರ್ ಪೂಜಾರಿ, ಶರ್ಫುದ್ದಿನ್ ಶೇಖ್, ಮೊಹಮ್ಮದ್ ನಿಯಾಜ್, ವೈ. ಸುಧೀರ್ ಕುವಾರ್, ಜಿತೇಂದ್ರ ಫುರ್ಟಾಡೋ, ಅಬ್ದುಲ್ ಅಜೀಜ್ ಹೆಜ್ಮಾಡಿ, ಶಾಂತಲಾತ ಶೆಟ್ಟಿ, ನವೀನ್ ಎನ್ ಶೆಟ್ಟಿ, ಕಿರಣ್ ಹೆಗ್ಡೆ, ಕಿಶೋರ್ ಕುವಾರ್ ಎರ್ವಾಳ್, ಶೇಖರ್ ಹೆಜ್ಮಾಡಿ, ಯಶವಂತ್ ಪಲಿವಾರು ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ವಂದಿಸಿದರು. ರಾಜೇಶ್ ಶೇರಿಗಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net