

ಕೊಳವಿ: ಆರೋಗ್ಯಕರ ಜೀವನ ಶೈಲಿಗೆ ಕ್ರೀಡೆಗಳು ಅತಿ ಮುಖ್ಯ. ಆಟಗಳು ಉತ್ತಮ ಮನಸ್ಸಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದು ಗ್ರಾಪಂ ಸದಸ್ಯ ಸುರೇಶ ಸನದಿ ಹೇಳಿದರು.
ಸಮೀಪದ ಮಮದಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೋಳಿ ಹಬ್ಬದ ಪ್ರಯುಕ್ತ ಜಾರಕಿಹೊಳಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಯುವಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸಲೆಂದು ಯುವ ನಾಯಕ ಅಮರನಾಥ ಜಾರಕಿಹೊಳಿ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾನೀಯ ಎಂದರು.
ಅಮರನಾಥ ಜಾರಕಿಹೊಳಿ 50,001 ರೂ., ಗ್ರಾಪಂ ಸದಸ್ಯರಾದ ಅಶೋಕ ಗೋಪಾಳಿ, ಸಿದ್ದಪ್ಪ ಕಳ್ಯಾಗೋಳ 30,001 ರೂ., ರಮೇಶ ಗಾಣಗಿ, ಅನಿಲ ಮುರಗೋಡ 20,001ರೂ. ಅನುಕ್ರಮವಾಗಿ ಪ್ರಥಮ, ದ್ವೀತಿಯ ಮತ್ತು 3ನೇ ಸ್ಥಾನ ಗೆದ್ದವರಿಗೆ ಬಹುಮಾನವಿದೆ ಎಂದರು.
ಮುಖಂಡರಾದ ಕೆಂಪಣ್ಣ ಮೆಲನ್ನವರ, ರಮೇಶ ಗಾಣಗಿ, ಸಿದ್ದಪ್ಪ ಕಳ್ಯಾಗೋಳ, ವೀರಭದ್ರ ಮೆಲನ್ನವರ, ಅಶೋಕ ಗೋಪಾಳಿ, ಅನಿಲ ಮುರಗೋಡ, ಹಾಗೂ ಇತರರು ಇದ್ದರು.