

ಯಲಬುರ್ಗಾ: ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಕ್ರೀಡೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಲಿ ಎಂದು ಬಿಇಒ ಪದ್ಮನಾಭ ಕಣರ್ಂ ಹೇಳಿದರು.
ತಾಲೂಕಿನ ಬೇವೂರು ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬೇವೂರು-ಕುದರಿಮೋತಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
ಕ್ರೀಡೆಗಳು ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋಲು-ಗೆಲುವಿನ ಬಗ್ಗೆ ಲೆಕ್ಕಿಸದೆ ಭಾಗವಹಿಸಬೇಕು. ಅಲ್ಲದೆ ನಿರ್ಣಾಯಕರ ನೀಡುವ ತೀರ್ಪಿಗೆ ಬದ್ಧರಾಗಿರಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಅಂದಮ್ಮ ಗವಿಸಿದ್ದಪ್ಪ ಬಳೆಗಾರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ ಗೌಡರ್, ಎಸ್‌ಕೆಎಸ್ ಸಂಸ್ಥೆ ಅಧ್ಯಕ್ಷ ಕೂಡ್ಲೆಪ್ಪ ಗೊಂದಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್,
ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಸಿಆರ್‌ಪಿ ಶರಣಪ್ಪ ಕುರ್ನಾಳ, ಸಂಸ್ಥೆಯ ಕಾರ್ಯದರ್ಶಿ ಡಿ.ಕೆ.ಗೊಂದಿ, ಪ್ರಮುಖರಾದ ಶೇಖರಗೌಡ ಪಾಟೀಲ್, ಸುರೇಶ ಮಡಿವಾಳರ, ಮಹಾವೀರ ಕಲಭಾವಿ, ಯಮನಪ್ಪ ಗಡ್ಡದ, ಸಿದ್ದಪ್ಪ ತುಪ್ಪದ, ರುದ್ರಪ್ಪ ಕೊಳಜಿ, ಚನ್ನವೀರಪ್ಪ ಹಳ್ಳಿ, ಕಲ್ಲಪ್ಪ ಹುಲಕೋಟಿ, ಶಂಕ್ರಪ್ಪ ಮ್ಯಾಗಡೆ, ಗೋದಾವರಿ ಶಿರೂರು, ಮಹಾಂತೇಶ ಹಿರೇಮಠ, ವಿರೇಶ ಅಂಗಡಿ ಇನ್ನಿತರರಿದ್ದರು.