ಕಲಬುರಗಿಯ ವಿವಿಧ ಕಡೆ ಪೊಲೀಸ್ ದಾಳಿ ಜುಜೂಕೋರರ ಬಂಧನ

gambling
Published on


ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ  ಜೂಜಾಟ  ಆಡುತ್ತಿದ್ದಾರೆ ಎಂಬ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ, ಹಲವರನ್ನು ಬಂಧಿಸಿದ್ದಾರೆ.
ನಗರದ ಮೊಮಿನಪುರ ಪ್ರದೇಶದ ತರಕಾರಿ ಮಾರ್ಕೇಟ್ ಬಳಿಯಲ್ಲಿ ಜೂಜಾಟದಲ್ಲಿ ತೊಡಗಿಸಿದ್ದ  ಐವರನ್ನು ಬಂಧಿಸಿ, ಜೂಜಿನಲ್ಲಿ ಪಣಕ್ಕೆ ಇರಿಸಿದ್ದ ೨೪,೪೮೦ ರೂ. ವಶಪಡಿಸಿಕೊಳ್ಳಲಾಗಿದೆ. ಚೌಕ್ ಪಿಎಸ್‌ಐ ಗೌಸ್ ಮಹಿಯೋದ್ದೀನ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ತಾಲೂಕಿನ ಇಟಗಾ (ಕೆ) ಗ್ರಾಮದ  ಅಂಭಾ ಭವಾನಿ ದೇವಾಲಯ ಹತ್ತಿರದಲ್ಲಿ ಜೂಜಾಟದಲ್ಲಿ ತೊಡಗಿದ್ದ ೯ ಜನರನ್ನು ಬಂಧಿಸಿ ೧೮,೭೨೦ ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಎಎಸ್‌ಐ ತಿಮ್ಮಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಫರಹತಾಬಾದ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆಜಾದಪುರ ಸೀಮಾಂತರದ ಮಾನಸ ಲೇಔಟ್ ಹಿಂಭಾಗದಲ್ಲಿರುವ  ಲಕ್ಷಿö್ಮÃ ಗುಡಿ ಮುಂಭಾಗದಲ್ಲಿ ಜೂಜಾಟ ಆಡುತ್ತಿದ್ದ  ೮ ಜನರನ್ನು ಬಂಧಿಸಿ, ೯,೨೭೦ ರೂ.ವಶಪಡಿಸಿಕೊಳ್ಳಲಾಗಿದೆ. ಎಎಸ್‌ಐ ಪ್ರಕಾಶ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಬಂಧಿಸಿ, ೬,೨೦೦ ರೂ. ವಶಪಡಿಸಿಕೊಳ್ಳಲಾಗಿದೆ.  ನಗರದ ಸ್ವಾರಗೇಟ್ ಬಳಿಯಲ್ಲಿ  ಜೂಜು ಆಡುತ್ತಿದ್ದ ೭ ಜನರ ಸೆರೆ ಹಿಡಿದು ೮,೮೦೦ ರೂ.ಜಪ್ತಿ ಮಾಡಿಕೊಳ್ಳಲಾಗಿದೆ. ಎರಡು ಕಡೆ ಪಿಎಸ್‌ಐ ಸಲೀಮೋದ್ಧೀನ್ ಮತ್ತು ಸಿಬ್ಬಂದಿ ಕೂಡಿಕೊಂಡು ದಾಳಿ ನಡೆಸಿದ್ದಾರೆ. ಸಬ್ ಅರ್ಬನ್ ಠಾಣೆಯಲ್ಲಿ ಕೇಸ್ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net