

ಕಾರ್ಕಳ: ಕಾರ್ಕಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಮೀಪ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಹಿಂಬದಿ ಜುಗಾರಿ ನಿರತರಾಗಿದ್ದವರನ್ನು ಕಾರ್ಕಳ ಪೊಲೀಸರು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಸಂದೀಪ ಕುಮಾರ್ ಶೆಟ್ಟಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ದಾಳಿ ನಡೆಸಿದ್ದು, ಶ್ರೀನಿವಾಸ, ಮಂಜುನಾಥ, ಮುತ್ತಣ್ಣ, ಮಂಜುನಾಥ, ನಾಗರಾಜ, ಲಕ್ಷಣ್, ಹೇಮಾ, ಹೇಮನ್ ಮಿಯ್ಯರು, ಚಿರಂಜೀವಿ, ಯಮನೂರಪ್ಪ, ಮಲ್ಲಯ್ಯ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಜುಗಾರಿಗೆ ಬಳಸಿದ್ದ 4,950 ರೂ. ನಗದು ಸಹಿತ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.