ಜುಗಾರಿ ಆಡುತ್ತಿದ್ದವರ ಬಂಧನ

GAMBLING
Published on

ಗಂಗೊಳ್ಳಿ: ಕುಂದಬಾರಂದಾಡಿ ಗ್ರಾಮದ ಕೊಳೂರು ಕ್ರಾಸ್ ಎಂಬಲ್ಲಿನ ಯುನಿಟಿ ಕ್ರಶರ್ ಬಳಿಯ ಸರ್ಕಾರಿ ಹಾಡಿಯಲ್ಲಿ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಸಿಬ್ಬಂದಿಯೊಂದಿಗೆ ಗಂಗೊಳ್ಳಿ ಠಾಣಾ ಪಿಎಸ್‌ಐ ಬಸವರಾಜ ಕನಶೆಟ್ಟಿ ದಾಳಿ ನಡೆಸಿದರು. ಜುಗಾರಿ ಆಡುತ್ತಿದ್ದ ಕುಂದಬಾರಂದಾಡಿ ಗ್ರಾಮದ ಪ್ರವೀಣ(35), ಮಹಾದೇವ (49), ಸುಧಾಕರ (38), ಪ್ರಶಾಂತ್ (36), ಬಾಲ (58), ದಿನೇಶ್ (29) ಮತ್ತು ಹರ್ಕೂರು ನಾರ್ಕಳಿ ಗ್ರಾಮದ ವಿಕ್ರಮ (27) ಎಂಬುವರನ್ನು ಬಂಧಿಸಿ, 8360 ರೂ. ನಗದು, ಇಸ್ಪೀಟ್ ಎಲೆ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net