ಕೈಗಾರಿಕೆ ಸ್ಪಿರಿಟ್‌ ಹೆಸರಲ್ಲಿ ಭಾರೀ ವಂಚನೆ

ಅಬಕಾರಿ ಅಧಿಕಾರಿಗಳು ಸ್ಪಿರಿಟ್‌ ಟ್ಯಾಂಗರ್‌ ವಶಕ್ಕೆ ಪಡೆದರು
ಅಬಕಾರಿ ಅಧಿಕಾರಿಗಳು ಸ್ಪಿರಿಟ್‌ ಟ್ಯಾಂಗರ್‌ ವಶಕ್ಕೆ ಪಡೆದರು
Published on
ಕಾರವಾರ: ನಕಲಿ ದಾಖಲೆ ಸೃಷ್ಟಿಸಿ ಮದ್ಯ ತಯಾರು ಮಾಡುವ ಎಥನಾಲ್ (ಸ್ಪಿರಿಟ್)ನ್ನು ರಾಜ್ಯದಿಂದ ಗೋವಾಕ್ಕೆ ದೊಡ್ಡ ಪ್ರಮಾಣದಲ್ಲಿ ಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ. ಅಬಕಾರಿ ಇಲಾಖೆ ಅದರ ಹಿಂದೆ ಬಿದ್ದಿದ್ದು, ಧಾರವಾಡ-ಗೋವಾ ರಾಷ್ಟ್ರೀಯ ಹೆದ್ದಾರಿಯ ಅನಮೋಡ ತನಿಖಾ ಠಾಣೆಯಲ್ಲಿ 40 ಲಕ್ಷ ಮೌಲ್ಯದ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ. ರಾಜ್ಯದಿಂದ ಈ ರೀತಿ ತಪ್ಪು ಮಾಹಿತಿ ನೀಡಿ ಸುಮಾರು 65 ಲಕ್ಷ ಲೀಟರ್‌ಗೂ ಹೆಚ್ಚು ಸ್ಪಿರಿಟ್ ಈ ರೀತಿ ಸಾಗಣೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಾವಣಗೆರೆ ಶುಗರ್ ಕಂಪನಿಯಿಂದ ಗೋವಾದ ಕುಂಡೆಂನ್‌ನ ಕೆಮ್ ಕಾರ್ಪ್ ಎಂಬ ಕಂಪನಿಗೆ 30 ಸಾವಿರ ಲೀಟರ್ ಸ್ಪಿರಿಟ್, ಅದೇ ಜಿಲ್ಲೆಯ ಕೋಲೆಹಳ್ಳಿಯ ಶ್ರೀ ಸಾಯಿ ಟ್ರೇಡರ್ಸ್ ಕಂಪನಿಯಿಂದ ಗೋವಾದ ವರ್ಧನ್ ಸಪ್ಲಿಮೆಂಟ್ಸ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಕಂಪನಿಗೆ 20 ಸಾವಿರ ಲೀಟರ್ ಸ್ಪಿರಿಟ್ ಕೊಂದೊಯ್ಯಲಾಗುತ್ತಿದೆ ಎಂದು ದಾಖಲೆ ಇತ್ತು. ಅದು ಮದ್ಯ ತಯಾರು ಮಾಡಲಾಗದ ಡಿ-ನೇಚರ್ಡ್ ರೆಕ್ಟಿಫೈಡ್ ಸ್ಪಿರಿಟ್ ಎಂದು ದಾಖಲೆಯಲ್ಲಿ ತಿಳಿಸಲಾಗಿತ್ತು. ಆದರೆ, ಪರಿಶೀಲನೆ ನಡೆಸಿದಾಗ ಅದು ಎಕ್ಸ್ಟ್ರಾ ನ್ಯಾಚುರಲ್ ಆಲ್ಕೋಹಾಲ್ ಎಂಬುದು ಪತ್ತೆಯಾಗಿದೆ. ಗೋವಾದಲ್ಲಿ ಪರಿಶೀಲಿಸಲಾಗಿ ಎರಡೂ ವಿಳಾಸಗಳು ಇಲ್ಲ ಎಂಬುದು ಪತ್ತೆಯಾಗಿದೆ.
ಇದರಿಂದ ಎರಡೂ ಟ್ಯಾಂಕರ್‌ಗಳನ್ನು ಜಪ್ತು ಮಾಡಲಾಗಿದ್ದು, ಮಧ್ಯ ಪ್ರದೇಶ ಮೂಲದ ಲಾರಿ ಚಾಲಕ ಮಗ್ಗರ್ ಸಿಂಗ್ ಮೋಹನ ಸಿಂಗ್, ಗದಗ ಜಿಲ್ಲೆ ರೋಣ ತಾಲೂಕಿನ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ಎಂಬ ಇಬ್ಬರನ್ನು ಬಂಽಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಎರಡು ಟ್ಯಾಂಕರ್ ಮೌಲ್ಯ ಸೇರಿ 90 ಲಕ್ಷ ರೂ. ಸ್ವತ್ತನ್ನು ಜಪ್ತು ಮಾಡಿದ್ದು, ದಾಂಡೇಲಿ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಜಾರಿ ಮತ್ತು ತನಿಖೆಯ ಜಂಟಿ ಆಯುಕ್ತ ಎ.ಎಲ್. ನಾಗೇಶ ತಿಳಿಸಿದರು.

ಹೇಗೆ ಅಕ್ರಮ..?

ಕಬ್ಬಿನ ಕಾರ್ಖಾನೆಗಳಲ್ಲಿ ಹಾಗೂ ಜೋಳದ ಕಾರ್ಖಾನೆಗಳಲ್ಲಿ ಎಥೆನಾಲ್ ಉತ್ಪತ್ತಿಯಾಗುತ್ತದೆ. ಅದನ್ನು ಮದ್ಯ ತಯಾರಿಕೆಗೆ ಬಳಸಬಹುದು. ಆದರೆ, ಅದರ ಸಾಗಣೆಗೆ ಅಬಕಾರಿ ಇಲಾಖೆಯ ಅನುಮತಿ ಬೇಕು. ಅದರ ಸಾಗಣೆಯಿಂದ ಹಿಡಿದು ಮದ್ಯ ತಯಾರಿಕೆಯವರೆಗೆ ನಿಗಾ ಇರುತ್ತದೆ. ಅದರಿಂದ ಇಂತಿಷ್ಟೇ, ಇಂಥದ್ದೇ ಮದ್ಯ ತಯಾರು ಮಾಡಲಾಗಿದೆ ಎಂದು ಘೋಷಣೆ ಮಾಡಬೇಕು. ಇದರಿಂದ ಮದ್ಯ ಕಂಪನಿಗಳಿಗೆ ಆ ಮೂಲಕ ಎಥೆನಾಲ್ ಪೂರೈಕೆದಾರರಿಗೆ ಸೀಮಿತ ಲಾಭವಾಗುತ್ತದೆ. ಆದರೆ, ವಿಕೃತಗೊಳಿಸಿದ ಎಂದರೆ ಮದ್ಯ ತಯಾರಿಕೆಗೆ ಯೋಗ್ಯವಲ್ಲದ (ನಾನ್ ಪೋಟೆಬಲ್) ಡಿ-ನ್ಯಾಚರ್ಡ್ ಸ್ಪಿರಿಟ್ ಎಂದರೆ ಅಬಕಾರಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ನೇಲ್ ಪಾಲೀಶ್, ಸೆನಿಟೈಸರ್ ಸೇರಿ ಇತರ ವಿವಿಧ ಕೈಗಾರಿಕೆಗಳಿಗೆ ಬಳಸಲಾಗುತ್ತದೆ. ಹಾಗೆ ಕೈಗಾರಿಕೆಗೆ ಎಂಬ ದಾಖಲೆಯೊಂದಿಗೆ ಕೊಂಡೊಯ್ದು, ಅದನ್ನು ಮದ್ಯ ತಯಾರಿಕೆಗೆ ಬಳಸಲಾಗುತ್ತಿದೆ. ನಕಲಿ ಮದ್ಯಗಳನ್ನು ತಯಾರಿಸಿ ದುಬಾರಿ ಬೆಲೆಗೆ ಮಾರಾಟ ಮಾಡಬಹುದಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಎ.ಎಲ್.ನಾಗೇಶ ತಿಳಿಸಿದರು.
ಸುಮಾರು 3 ಲೀಟರ್ ಸ್ಪಿರಿಟ್‌ನಿಂದ ಯಾವುದೇ ಬ್ರಾಂಡ್‌ನ ಒಂದು ಬಾಕ್ಸ್ ಮದ್ಯವನ್ನು ತಯಾರಿಸಬಹುದು. ಎಂದರೆ ಈಗ ವಶಪಡಿಸಿಕೊಂಡ 50 ಸಾವಿರ ಲೀಟರ್ ಸ್ಪಿರಿಟ್‌ನಿಂದ ಸುಮಾರು 2 ಲಕ್ಷ ಲೀಟರ್ ಮದ್ಯ ಮಾಡಬಹುದು. ಸುಮಾರು 48 ಕೋಟಿ ಆದಾಯ ಗಳಿಸಬಹುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುವುದನ್ನು ತಪ್ಪಿಸಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದರು.

ಅದೇ ಟ್ಯಾಂಕರ್ ಮತ್ತೆ ಬಳಕೆ

2023 ರ ಸೆಪ್ಟೆಂಬರ್ ತಿಂಗಳಲ್ಲಿ ದಾವಣಗೆರೆಯಿಂದ ಗೋವಾಕ್ಕೆ ಕೊಂಡೊಯ್ಯುತ್ತಿದ್ದ ಇದೇ ಟ್ಯಾಂಕರ್‌ನ್ನು ಕಾರವಾರ ಚೆಕ್‌ಪೋಸ್ಟ್ನಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಸದಾಶಿವ ಕೊರ್ತಿ ತಡೆದು ಪ್ರಕರಣ ದಾಖಲಿಸಿದ್ದರು. ಆದರೆ, ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸವಾಗಿತ್ತು. ಕೊನೆಗೆ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿತ್ತು.
ಅಕ್ರಮ ಬಯಲಿಗೆಳೆದ ಅಬಕಾರಿ ಇನ್ಸ್ಪೆಕ್ಟರ್ ಮೇಲೆಯೇ ಅಕ್ರಮ ಹಾಗೂ ಹಲ್ಲೆಯ ಆರೋಪ ಹೊರಿಸಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಶಾಸಕ ಸತೀಶ ಸೈಲ್ ಅವರು ಇನ್ಸ್ಪೆಕ್ಟರ್ ಜೊತೆ ಕೂಗಾಟ ನಡೆಸಿದ ವಿಡಿಯೋ ಸಹ ವೈರಲ್ ಆಗಿತ್ತು. ಎರಡು ವರ್ಷಗಳ ನಂತರವೂ ಅದೇ ಚಾಲಕ ಮತ್ತದೇ ಟ್ಯಾಂಕರ್‌ನಲ್ಲಿ ಸ್ಪಿರಿಟ್ ಕೊಂಡೊಯ್ಯುವಾಗ ಸಿಕ್ಕಿ ಬಿದ್ದಿದ್ದು, ಸಾಕಷ್ಟು ಪ್ರಭಾವಿಗಳ ಕೈವಾಡ ಇರುವ ಶಂಕೆ ಇದೆ.

ಆಧುನೀಕರಣಕ್ಕೆ ಪ್ರಸ್ತಾವನೆ

ಅಬಕಾರಿ ಇಲಾಖೆಯನ್ನು ಆಧುನೀಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎದು ಜಂಟಿ ಆಯುಕ್ತ ಎ.ಎಲ್.ನಾಗೇಶ ತಿಳಿಸಿದರು.
ಮಾಧ್ಯಮ ಪ್ರತಿನಿಽಗಳ ಜೊತೆ ಮಾತನಾಡಿದ ಅವರು, ಇಲಾಖೆ ಅಽಕಾರಿಗಳಿಗೆ ಶಸ್ತç ನೀಡಬೇಕು. ಶ್ವಾನ ದಳ, ಡಿಂಗಿ(ದೋಣಿ) ದಳ ನೀಡಬೇಕು. ಅಂತಾರಾಜ್ಯ ಚೆಕ್‌ಪೋಸ್ಟ್ಗಳಲ್ಲಿ ವಾಹನಗಳನ್ನು ಸ್ಕಾ÷್ಯನ್ ಮಾಡುವಂಥ ಯಂತ್ರಗಳನ್ನು ನೀಡಬೇಕು. ತನಿಖೆಗೆ ಮೊಬೈಲ್ ಕರೆಗಳ ದಾಖಲೆ (ಸಿಡಿಆರ್) ಪರಿಶೀಲಿಸುವ ಅಽಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗುವ ನಿರೀಕ್ಷೆ ಇದೆ ಎಂದರು. ಗೋವಾ-ಕರ್ನಾಟಕ ಗಡಿಯಲ್ಲಿ ವಿಶೇಷ ತಂಡ ರಚಿಸಿ ಅಕ್ರಮ ತಡೆಯಲು ವಿಶೇಷ ತಂಡ ರಚಿಸಲಾಗಿದ್ದು, ಬೇರೆ ಜಿಲ್ಲೆಯ ಅಽಕಾರಿಗಳನ್ನು ಇಲ್ಲಿ ನೇಮಿಸಲಾಗುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net