

ಬೆಂಗಳೂರು: ಮೇಕ್ರಿ ಸರ್ಕಲ್ ಬಳಿಯ ಕಿಂಗ್ಸ್ ಕೋರ್ಟ್ ಪ್ಯಾಲೇಸ್ ಮೈದಾನದಲ್ಲಿ ದಿಗ್ವಿಜಯ ನ್ಯೂಸ್ ಚಾನಲ್ ಮತ್ತು ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ನ.11ರಿಂದ 14ರವರೆಗೆ ಫರ್ನಿಚರ್ ಆ್ಯಂಡ್ ಹೋಮ್ ಡೆಕೋರ್ ಎಕ್ಸ್ಪೋ ನಡೆಯಲಿದ್ದು, ಬಹುತೇಕ ಫರ್ನಿಚರ್ಗಳ ಮೇಲೆ ಶೇ.70ವರೆಗೆ ರಿಯಾಯಿತಿ ನೀಡಲಾಗುತ್ತದೆ. ಉತ್ತಮ ಗುಣಮಟ್ಟದ, ವಿವಿಧ ಬಣ್ಣದ, ವಿಭಿನ್ನ ಶೈಲಿಯ, ತರಹೇವಾರಿ ವಿನ್ಯಾಸದ ಫರ್ನಿಚರ್ ಮತ್ತು ಮನೆ ವಿನ್ಯಾಸದ ಪರಿಕರಗಳು ಒಂದೇ ಸೂರಿನಡಿ ಸಿಗಲಿದೆ.
ಎಕ್ಸ್ಪೋದಲ್ಲಿ ಏನೆಲ್ಲಾ ಇರುತ್ತೆ?: ಎಕ್ಸ್ಪೋದಲ್ಲಿ ಇಟಾಲಿಯನ್ ಡಿಸೈನರ್ ಸೋಫಾಗಳು, ಕಚೇರಿಗೆ ಬೇಕಾದ ಪೀಠೋಪಕರಣಗಳು, ಕಾರ್ಪೆಟ್ಗಳು, ಮರದಲ್ಲಿ ಕೆತ್ತಿದ ಪೀಠೋಪಕರಣಗಳು, ಬೆಡ್ರೂಮ್ ಸೆಟ್ಗಳು, ವಾಲ್ಫ್ರೇಮ್ಗಳು, ಮಸಾಜ್ ಚೇರ್ಗಳು, ಮ್ಯಾಟ್ರೆಸೆಸ್ (ಹಾಸಿಗೆ), ಆರಾಮದಾಯಕ ಸೋಫಾಗಳು, ತರಹೇವಾರಿ ಡೈನಿಂಗ್ ಸೆಟ್ಗಳು, ಗಾರ್ಡನ್ ಪೀಠೋಪಕರಣಗಳು, ಆರ್ಟಿಫಿಷಿಯಲ್ ಹೂವುಗಳು, ಡೆಕೋರೇಟಿವ್ ವಸ್ತುಗಳು, ಟೀಕ್ವುಡ್ ಪೀಠೋಪಕರಣಗಳು ಸೇರಿ ಇನ್ನೂ ಅನೇಕ ಉಪಕರಣಗಳು ಇಲ್ಲಿ ಲಭ್ಯವಾಗುತ್ತವೆ.
ಕೇಂದ್ರೀಕರಿಸಿಕೊಂಡು ಕಿಂಗ್ಸ್ ಕೋರ್ಟ್ ಪ್ಯಾಲೇಸ್ ಮೈದಾನದಲ್ಲಿ (ಗೇಟ್ ನಂ.5) ಈ ಎಕ್ಸ್ಪೋ ಶುರುವಾಗಲಿದ್ದು, ಪಿಕ್ನಿಕ್ ಮಾದರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆಯಲು ಫರ್ನಿಚರ್ ಎಕ್ಸ್ಪೋ-2022ಕ್ಕೆ ಗ್ರಾಹಕರು ಭೇಟಿ ನೀಡಬಹುದು. ಎಲ್ಲ ಪೀಠೋಪಕರಣಗಳನ್ನೂ ಕಣ್ತುಂಬಿಕೊಳ್ಳಬಹುದು. ತಮಗೆ ಇಷ್ಟವಾದಲ್ಲಿ, ತಮ್ಮ ಮನೆಗೆ ಹೊಂದಿಕೆಯಾಗುವ ವಸ್ತುವನ್ನು ಸ್ಥಳದಲ್ಲಿಯೇ ಖರೀದಿಸಬಹುದು. ಎಕ್ಸ್ಪೋಗೆ ಬರುವವರಿಗೆ ಪ್ರವೇಶ ಉಚಿತ. ಕಾರ್ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶ ಇದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ. 96111 76669, 96115 30444, 89710 75959 ಸಂಪರ್ಕಿಸಿ.