

ಬೆಳ್ತಂಗಡಿ: ಭಟ್ರೆ ಬೈಲು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ 2,50,000 ರೂಪಾಯಿ ಡಿ.ಡಿ.ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆ ನಿರ್ದೇಶಕ ಮಹಾಬಲ ಕುಲಾಲ್ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕಾರಾಮ ನಾಯಕ್, ಕಾರ್ಯದರ್ಶಿ ಸಂತೋಷ್ ಕಜೆಕೋಡಿ, ದೇವಸ್ಥಾನ ಟ್ರಸ್ಟಿಗಳಾದ ಅನಂತಪ್ರಸಾದ್ ನೈತಡ್ಕ, ಸತೀಶ್ ಬೇನೆಪ್ಪು, ಬಾಲಕೃಷ್ಣ ಭಟ್ ನೈತಡ್ಕ, ಜಯಾನಂದ ಇಂತ್ರಿ ಬೆಟ್ಟು, ಜನಾರ್ದನ್ ಕುಲಾಲ್, ಸುಜಿತ್ ಮರಮ, ಗೌತಮ್ ನಾರಾಯಣ್, ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿ ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ, ತೆಕ್ಕರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶಿವರಾಮ್, ಒಕ್ಕೂಟ ಅಧ್ಯಕ್ಷ ಪದ್ಮನಾಭ ಕಜೆಕೊಡಿ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಅನಲ್ಕೆ ಮೊದಲಾದವರು ಉಪಸ್ಥಿತರಿದ್ದರು.