

ಕಾರವಾರ: ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದ ಜಲ ಮೂಲಗಳು ಮಲಿನವಾಗಿ ಗ್ರಾಮೀಣ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುವುದನ್ನು ಪರಿಗಣಿಸಿ ಸರ್ಕಾರದ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲ ಮೂಲಗಳ ನೀರಿನ ಗುಣಮಟ್ಟ ಪರಿಶೀಲನೆ ಕಡ್ಡಾಯಗೊಳಿಸಿ ನೀರಿನ ಪರಿಕ್ಷೆಗಾಗಿ ಎಫ್‌ಟಿಕೆ ಕಿಟ್ ವಿತರಿಸಿದ್ದು, ಮುಂಡಗೋಡ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಜಲ ಮೂಲಗಳ ನೀರಿನ ಗುಣಮಟ್ಟವನ್ನು ಈ ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷೆ ನಡಸಬಹುದು ಎಂಬ ಕುರಿತು ಎಲ್ಲ ಗ್ರಾಮ ಪಂಚಾಯತಿಗಳ ಅಭಿವೃದ್ಧಿ
ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ನೀರು ಗಂಟಿಗಳಿಗೆ ಮುಂಡಗೋಡ ತಾ.ಪಂ ಸಭಾಂಗಣದಲ್ಲಿ ಸೋಮವಾರ ಗ್ರಾಪಂ
ಮಟ್ಟದ ನೀರಿನ ಮಾದರಿಗಳ ಮೂಲಕ ತರಬೇತಿ ನಡೆಸಿ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಕ್ರಿಯೆಗಳ ಬಗ್ಗೆ ವಿವರವಾಗಿ
ತಿಳಿಸಿಕೊಡಲಾಯಿತು.
ತರಬೇತಿಗೆ ಸಾಂಕೇತಿಕವಾಗಿ ಚಾಲನೆ ನೀಡಿದ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ.
ದಾಸನಕೊಪ್ಪ ಮಾತನಾಡಿ, ಪ್ರತಿಯೊಂದು ಜಲ ಮೂಲದ ನೀರಿನ ಗುಣಮಟ್ಟ ಪರೀಕ್ಷೆ ಕಡ್ಡಾಯವಾಗಿದ್ದು, ಇದರ ಸಂಪೂರ್ಣ
ಜವಬ್ದಾರಿಯನ್ನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ, ಕಾರ್ಯದರ್ಶಿಗಳಗೆ ಹಾಗೂ ನೀರು ಗಂಟಿಗಳಿಗೆ ವಹಿಸಲಾಗಿದೆ.
ಹೀಗಾಗಿ ತರಬೇತಿ ಆಯೋಜಿಸಿದ್ದು, ತರಬೇತಿಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ನೀರಿನ ಪರೀಕ್ಷಾ ವಿಧಾನದ ಬಗೆಗೆ
ಸಮಗ್ರವಾಗಿ ತಿಳಿದುಕೊಳ್ಳಬೇಕು. ಜೊತೆಗೆ ತರಬೇತಿಯಲ್ಲಿ ಹೇಳಿದ ರೀತಿಯೇ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲ
ಮೂಲದಿಂದ ನೀರಿನ ಮಾದರಿ ಸಂಗ್ರಹಿಸಿ ಕ್ರಮ ಬದ್ಧವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಜೊತೆಗೆ ಪ್ರತೀ ನೀರಿನ ಪರೀಕ್ಷೆಯ
ವರದಿಯನ್ನು ಕ್ರೂಢಿಕರಿಸಿ ನಿಗದಿತ ಅವಧಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್‌ಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಜೇಶ್ವರಿ
ಕದಂ ಮಾತನಾಡಿ, ಹಳ್ಳಿಗಾಡು ಪ್ರದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ನೀರಿನ ಗುಣಮಟ್ಟ ಪರೀಕ್ಷೆ ನಡೆಸುವ ಕಾರ್ಯ
ಉತ್ತಮವಾಗಿದೆ. ಇದರಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಹಲವು ಸಮಸ್ಯೆಗಳ ನಿವಾರಣೆ ಸಾಧ್ಯ. ನೀರಿನ ಗುಣಮಟ್ಟ
ಪರೀಕ್ಷಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಸವಾಲುಗಳ ನಿವಾರಣೆಗಾಗಿ ತರಬೇತಿ ಆಯೋಜಿಸಿದ್ದು, ಪ್ರತಿಯೊಬ್ಬರೂ
ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಏನಾದರೂ ಅರ್ಥವಾಗದಿದ್ದರೆ ಸ್ಥಳದಲ್ಲೆ ನುರಿತ ತರಬೇತುದಾರರ ಬಳಿ ಕೇಳಿ
ತಿಳಿದುಕೊಳ್ಳಬೇಕು ಎಂದರು.
ತರಬೇತಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೀರಿನ ಗುಣಮಟ್ಟ ಪರೀಕ್ಷಾ
ಪ್ರಯೋಗಾಲಯ ಶಿರಸಿಯ ನೀರಿನ ರಸಾಯನ ತಜ್ಞೆ ಅಶ್ವಿನಿ ನಾಯ್ಕ್ ಗ್ರಾಮ ಪಂಚಾಯತಿಗಳಿAದ ಸಂಗ್ರಹಿಸಿದ ನೀರಿನ ಮಾದರಿಗಳ
ಮೂಲಕ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಪಿಆರ್‌ಇಡಿ ಹಾಗೂ ನರೇಗಾ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ, ವ್ಯವಸ್ಥಾಪಕ ಪ್ರಕಾಶ
ಎಂ.ಕೆ. ಸೇರಿದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ನೀರು ಗಂಟಿಗಳು, ಐಇಸಿ ಸಂಯೋಜಕರು,
ತಾಪಂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.