

ಹಟ್ಟಿಚಿನ್ನದಗಣಿ: ಭಾರತ ಜನಸಂಖ್ಯೆ ಪ್ರಪಂಚದಲ್ಲೇ ಮೊದಲ ಸ್ಥಾನಕ್ಕೆ ತಲುಪುತ್ತಿದೆ, ಆದರೆ ಕ್ರೀಡಾಪಟುಗಳ ಸಂಖ್ಯೆ ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಹಟ್ಟಿ ವಲಯದ ಶಿಕ್ಷಣ ಸಂಯೋಜಕ ಬಸವರಾಜ್ ಕರಡಿ ಕಳವಳ ವ್ಯಕ್ತಪಡಿಸಿದರು.
ಇದನ್ನು ಓದಿ: ಸಾಮಾಜಿಕ ಜಾಲತಾಣದ ಮೇಲೆ ನಿಗಾ
ಹಟ್ಟಿಚಿನ್ನದಗಣಿ ಕಂಪನಿಯ ದಾರುವಾಲಾ ಕ್ರೀಡಾಂಗಣದಲ್ಲಿ ಗುರುಗುಂಟಾ, ಗೌಡೂರು, ವೀರಾಪೂರ ವಲಯ ಮಟ್ಟದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಬುಧವಾರ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ದೈಹಿಕ ಕಸರತ್ತು ಕಡಿಮೆಯಾಗುತ್ತಿದೆ. ಆಧುನಿಕ ಆಹಾರ ಪದ್ಧತಿ, ಸಾಮಾಜಿಕ ಜಾಲತಾಣಗಳ ಹಾವಳಿ ವಿದ್ಯಾರ್ಥಿಗಳು-ಮತ್ತು ಯುವಪಡೆಯನ್ನು ಕುಗ್ಗಿಸುತ್ತಿದೆ. 6ನೇ ತರಗತಿಯಿಂದ ಇಲಾಖೆ ದೈಹಿಕ ಶಿಕ್ಷಣವನ್ನು ಪಠ್ಯ ವಿಷಯವನ್ನಾಗಿ ಮಾಡಿದ್ದು, ವಿಷಯದಷ್ಟೇ ದೈಹಿಕ ಶಿಕ್ಷಣಕ್ಕೂ ಪ್ರಾಶಸ್ತ್ಯ ಕೊಟ್ಟು ಅಭ್ಯಾಸ ಮಾಡಬೇಕು ಎಂದರು.