

ಆಲ್ದೂರು: ದೇಶದಲ್ಲಿ ಜು.1ರಂದು ಮೂರು ಹೊಸ ಅಪರಾಧ ಕಾನೂನುಗಳು ಜಾರಿಯಾಗಲಿವೆ. ನೂತನ ಕಾನೂನುಗಳ ಪ್ರಕಾರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್ ಗ್ರೂಪ್‌ಗಳ ಸಂದೇಶ, ಕಮೆಂಟ್‌ಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗುವುದು ಎಂದು ಚಿಕ್ಕಮಗಳೂರು ಪೊಲೀಸ್ ಉಪ ಅಧೀಕ್ಷಕ ಡಾ. ಶೈಲೇಂದ್ರ ಹೇಳಿದರು.
ಸತ್ತಿಹಳ್ಳಿ ಗ್ರಾಪಂ ಹಾಂದಿ ಗ್ರಾಮದಲ್ಲಿ ಆಯೋಜಿಸಿದ್ದ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಗ್ರೂಪ್‌ಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು ಎಂದರು.
ಹಾಂದಿ ಭೀಮಾ ನಗರದಲ್ಲಿ 80 ಮನೆಗಳಿದ್ದು, ಮೂಲ ಸೌಲಭ್ಯಗಳಿಲ್ಲದೆ ಬದುಕುತ್ತಿದ್ದೇವೆ. ಗ್ರಾಮಕ್ಕೆ ರಸ್ತೆಯಿಲ್ಲ. ಕುಡಿಯಲು ನೀರಿಲ್ಲ ಎಂದು ಅಲ್ಲಿನ ನಿವಾಸಿಗಳು ಸಭೆಯ ಗಮನಕ್ಕೆ ತಂದರು.
ನಂತರ ಭೀಮಾ ನಗರ ದಲಿತ ಕಾಲನಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಿದರು. ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ತಿಳಿಸಿದರು.
ಸತ್ತಿಹಳ್ಳಿ ಗ್ರಾಪಂ ಅಧ್ಯಕ್ಷ ಧ್ರುವಕುಮಾರ್, ಸದಸ್ಯರು, ಆಲ್ದೂರು ವೃತ್ತ ನಿರೀಕ್ಷಕ ರಾಜಶೇಖರ್, ಪಿಎಸ್‌ಐ ಅಕ್ಷಿತಾ, ಸಿಬ್ಬಂದಿ ಕುಮಾರ್, ಆನಂದ್, ರವೀಶ್ ಇದ್ದರು.